ಮಂಗಳೂರು ನ 18 : ತುಳುನಾಡ ಚಕ್ರವರ್ತಿ, ಆಕ್ಷನ್ ಕಿಂಗ್ ಅರ್ಜುನ್ ಕಾಪಿಕಾಡ್ ಗೆ " ಮಟ್ಟ್ ದ ಪೊನ್ನು" ಸಿಕ್ಕಿದ್ದಾಳೆ. ಅವರ ಮನದರಿಸಿಯಾಗಲಿರುವವರು ಬಹುಕಾಲದ ಕಾಲೇಜಿನ ಗೆಳತಿ ಕಾವ್ಯಾ. ಕಳೆದ ಮೇ 29,ರಂದು ನಟ ಅರ್ಜುನ್ ಕಾಪಿಕಾಡ್ ಗೆಳತಿ ಕಾವ್ಯ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿರುವ ಇವರು ಸದ್ಯದಲ್ಲೇ ಗೃಹಸ್ಥಾಶ್ರಮಕ್ಕೆ ಕಾಲಿಡಲಿದ್ದಾರೆ.
ದೇವದಾಸ್ ಕಾಪಿಕಾಡ್ ಮತ್ತು ಶರ್ಮಿಳಾ ಕಾಪಿಕಾಡ್ ದಂಪತಿಗಳ ಮಗನಾಗಿ ಸೆಲೆಬ್ರಿಟಿ ಪ್ಯಾಮಿಲಿಯಲ್ಲಿ ಹುಟ್ಟಿದ ಅರ್ಜುನ್ ಗೆ ಈಗ 27 ರ ಹರಯ. ಮಂಗಳೂರಿನ ಬ್ಯುಜಿನೆಸ್ ಆಫ್ ಮ್ಯಾನೇಜ್ ಮೆಂಟ್ ಕಾಲೇಜ್ ನಲ್ಲಿ ಎಂಬಿಎ ಪದವಿ ಪಡೆದುಕೊಂಡಿರುವ ಆಕ್ಷನ್ ಕಿಂಗ್ ನ ಕ್ವೀನ್ ಆಗಲಿರುವ ಕಾವ್ಯಾ ಕೂಡಾ ಎಂಬಿಎ ಪಧವೀಧರೆ. ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಸನ್ನಿದಿಯಲ್ಲಿ ಡಿಸೆಂಬರ್ 4 ರಂದು ಗೃಹಸ್ಥಾಶ್ರಮಕ್ಕೆ ಕಾಲಿಡುವ ಅರ್ಜುನ್ ಕನ್ನಡ ಸೇರಿದಂತೆ ತುಳುವಿನ ಅನೇಕ ಚಿತ್ರದಲ್ಲಿ ನಟಿಸಿ ತನ್ನದೇ ಅಬಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ.ಇನ್ನು ಇವರ ಮದುವೆಯ ಆರತಕ್ಷತೆ ಕೂಟ ಡಿ. 6 ರಂದು ಮರವೂರಿನ ಪ್ರತಿಷ್ಟಿತ ರೆಸಾರ್ಟ್ ನಲ್ಲಿ ನಡೆಯಲಿದೆ.ದೇವದಾಸ್ ಕಾಪಿಕಾಡ್ ಮತ್ತು ಶರ್ಮಿಳಾ ಕಾಪಿಕಾಡ್ ಕೂಡಾ ಅವರ ಮಗನ ಮದುವೆಯ ಭರದ ಸಿದ್ದತೆಯಲ್ಲಿ ಬ್ಯೂಸಿಯಾಗಿದ್ದಾರೆ. ಇನ್ನು ತುಳುನಾಡಿನ ಚಿತ್ರರಂಗದ ಗಣ್ಯಾತಿ ಗಣ್ಯರು ಈ ಮದುವೆಯಲ್ಲಿ ಹಾಜರಿರೋದು ಗ್ಯಾರಂಟಿಯಾಗಿದೆ.