ಬಂಟ್ವಾಳ,ಏ30(DaijiworldNews/AZM):ಬಂಟ್ವಾಳದಲ್ಲಿ ನಡೆದ ದನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಪೊಲೀಸರು ಕಳವಾದ ದನಗಳು ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳನ್ನು ಇಮ್ರಾನ್(31),ಜೈನುದ್ದೀನ್(22),ಹಿದಾಯುತುಲ್ಲ(24),ಹಾಗೂ ಫಾರೂಕ್(29) ಎಂದು ಗುರುತಿಸಲಾಗಿದೆ. ಈ ಆರೋಪಿಗಳ ಜೊತೆಯೇ ಅವರು ಕಳವುಗೈದ 4 ದನಗಳನ್ನು ಹಾಗೂ ಪ್ರಕರಣಕ್ಕೆ ಬಳಸಿದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಅಮ್ಮೆಮಾರ್ ಮತ್ತು ಕುಂಪನಮಜಲು ಪ್ರದೇಶಕ್ಕೆ ಸೇರಿದವರಾಗಿದ್ದಾರೆ.
ಆರೋಪಿಗಳ ಮೇಲೆ ಈ ಹಿಂದೆಯೂ ಬಂಟ್ವಾಳ ಗ್ರಾಮಾಂತರ, ಬಂಟ್ವಾಳ ನಗರ, ವಿಟ್ಲ, ಪೂಂಜಾಲಕಟ್ಟೆ, ವಾಮಂಜೂರು, ಕಾವೂರು, ಕೋಣಾಜೆ, ಉಳ್ಳಾಲ, ಸೋಮವಾರ ಪೇಟೆ, ಕುಶಾಲನಗರ, ಸಕಲೇಶಪುರ, ಬಜಪೆ, ಮಡಿಕೇರಿ, ಶನಿವಾರ ಸಂತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದನ ಕಳ್ಳತನ, ಹಲ್ಲೆ, ದೊಂಬಿ, ಪ್ರಕರಣಗಳು ದಾಖಲಾಗಿದೆ.
ಆರೋಪಿಗಳನ್ನು ನ್ಯಾಯಾಲಯದ ಮುಂದೆ ಪೊಲೀಸರು ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ