ಮಂಗಳೂರು,ಮೇ2(DaijiworldNews/AZM):ಮಂಗಳೂರು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಸಂಸ್ಥೆಯಲ್ಲಿ ಹಾಲು ವಿತರಣಾ ವಾಹನದ ಗುತ್ತಿಗೆದಾರರು ಮತ್ತು ಸಿಬ್ಬಂದಿಯ ಸಂತೃಪ್ತಿ ಸೇವೆಗಾಗಿ ಸಮಾಲೋಚನೆ ಸಭೆ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ದ.ಕ. ಹಾಲು ಉತ್ಪಾದಕರ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಜಿ.ವಿ.ಹೆಗ್ಡೆಯವರು ವಹಿಸಿದ್ದರು.
ಸಾಧನೆ ಹಾದಿಯಲ್ಲಿ ಹೈನುಗಾರರ ಹಾಗೂ ಗ್ರಾಹಕರ ಸಂತೃಪ್ತಿ ನಂದಿನಿಯ ಧ್ಯೇಯವಾಗಿದೆ ಎಂದು ಇದೇ ಸಂದರ್ಭದಲ್ಲಿ ಹೆಗ್ಡೆಯವರು ತಿಳಿಸಿದರು. ಇನ್ನು ಹಾಲು ಮನುಷ್ಯನ ಬೌದ್ಧಿಕ,ಭೌತಿಕ ಮತ್ತು ಸರ್ವಾಂಗೀಣ ಅಭಿವೃದ್ಧಿಗೆ ಅತ್ಯಗತ್ಯ ಆಹಾರ. ಏ.22ರಂದು ಸಂಸ್ಥೆ 84.925 ಕೆ.ಜಿ ಮೊಸರು ಮಾರಾಟ ಹೊಸ ದಾಖಲೆ. ನಂದಿನಿ ಹಾಲು ಮತ್ತು ಉತ್ಪನ್ನಗಳು ಜಿಲ್ಲೆಯಲ್ಲಿ ಜನಪ್ರಿಯವಾಗಿದ್ದು ಗ್ರಾಹಕರಿಗೆ ಇನ್ನಷ್ಟು ಉತ್ತಮ ಸೇವೆಯನ್ನು ನೀಡುವತ್ತ ಸಂಸ್ಥೆಯ ಸಿಬ್ಬಂದಿ ಕಾರ್ಯಪ್ರವೃತ್ತರಾಗಬೇಕು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಡೇರಿ ವಿಭಾಗದ ವ್ಯವಸ್ಥಾಪಕ ಡಿ.ಕೆ. ಶಿವಶಂಕರ ಸ್ವಾಮಿ, ಮಾರುಕಟ್ಟೆ ವಿಭಾಗ ವ್ಯವಸ್ಥಾಪಕ ಕೆ.ಜಯದೇವಪ್ಪ, ಉಪ ವ್ಯವಸ್ಥಾಪಕ ಮಾರುಕಟ್ಟೆ ಡಾ ರವಿರಾಜ್ ಉಡುಪ, ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.