ಕುಂದಾಪುರ ನ 19 : ಪ್ರಕರಣಗಳ ತನಿಖೆಯ ವೇಗ ಹೆಚ್ಚಾಗಿದೆ. ಈ ಮೊದಲಿಗಿಂತ ಹೆಚ್ಚು ಪ್ರಕರಣಗಳ ವಿಲೇವಾರಿ ನಡೆಸಲಾಗುತ್ತಿದೆ., ಪ್ರತಿ ತಿಂಗಳು 90 ರಿಂದ 100 ಪ್ರಕರಣಗಳು ದಾಖಲಾಗುತ್ತಿದ್ದು, ಪ್ರತಿ ತನಿಖಾಧಿಕಾರಿಗಳಿಗೆ ಪ್ರತಿ ತಿಂಗಳು 50 ತನಿಖೆಗಳನ್ನ ನಡೆಸುತ್ತಿದ್ದಾರೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ತಿಳಿಸಿದರು.
ಅವರು ಕುಂದಾಪುರದಲ್ಲಿ ಪ್ರವಾಸಿ ಬಂಗ್ಲೆಯಲ್ಲಿ ಶನಿವಾರ ಮಾಧ್ಯಮಗಳೊಂದಿಗೆ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿ, ನಾನು ಅಧಿಕಾರ ಸ್ವೀಕರಿಸುವ ಸಂದರ್ಭ 6500 ಪ್ರಕರಣಗಳು ವಿಲೇವಾರಿಯಾಗಲು ಬಾಕಿ ಇತ್ತು ತ್ವರಿತ ವಿಲೇವಾರಿಯಿಂದ ಅದೇ ಸರಾಸರಿಯನ್ನ ಕಾಪಾಡಿಕೊಂಡು ಬಂದಿದ್ದೇವೆ. ಅದನ್ನ ಕಡಿಮೆ ಮಾಡುವ ಪ್ರಯತ್ನವನ್ನ ಮಾಡಲಾಗುತ್ತಿದ್ದು, ಇದಕ್ಕೆ ಮಾನವ ಸಂಪನ್ಮೂಲದ ಕೊರತೆ ಇದೆ. ಈ ಹಿನ್ನೆಲೆ ಸರ್ಕಾರಕ್ಕೆ ಎಪ್ರಿಲ್ ತಿಂಗಳಿನಲ್ಲಿ ಮನವಿಯನ್ನ ಮಾಡಲಾಗಿದೆ. 9 ಜನ ತನಿಖಾಧಿಕಾರಿಗಳನ್ನ ಮತ್ತು ಅದಕ್ಕೆ ಸಂಬಂಧಪಟ್ಟ ಸಿಬ್ಬಂದಿಗಳನ್ನ ನೀಡಬೇಕೆಂದು ಕೇಳಿದ್ದೇವೆ ಎಂದರು.