ಉಡುಪಿ, ಮೇ 03 (Daijiworld News/SM): ನೌಕಾದಳದವರೇ ಮೀನುಗಾರರನ್ನು ಸಾಯಿಸಿದ್ದಾರೆ ಎಂಬ ಪ್ರಮೋದ್ ಮಧ್ವರಾಜ್ ಹೇಳಿಕೆಗೆ ಶಾಸಕ ರಘುಪತಿ ಭಟ್ ಪ್ರತಿಕ್ರಿಯಿಸಿದ್ದಾರೆ.
ಸೈನ್ಯದ ಮೇಲೆ ಈ ರೀತಿಯ ಹೇಳಿಕೆ ನೀಡಿರುವುದು ಪ್ರಮೋದ್ ಮಧ್ವರಾಜ್ ಅವರ ಯೋಗ್ಯತೆ ಏನು ಅನ್ನೋದನ್ನು ಹೇಳುತ್ತದೆ ಎಂದು ತಿರುಗೇಟು ನೀಡಿದ್ದಾರೆ. ನಾನು ರಾಜಕೀಯ ಮಾಡಲು ಅವರೊಂದಿಗೆ ಹೋಗಿಲ್ಲ.
ಮೀನುಗಾರರ ಒತ್ತಾಯದ ಮೇರೆಗೆ ಅವರೊಂದಿಗೆ ತೆರಳಿದ್ದೆ. ಪ್ರಮೋದ್ ಮಧ್ವರಾಜ್ ಅವರೇ ಸಾಧ್ಯವಾದರೆ ರಾಜ್ಯ ಸರಕಾರದಿಂದ ಪರಿಹಾರ ಕೊಡಿಸುವ ಕೆಲಸ ಮಾಡಿ. ಅದು ಬಿಟ್ಟು ಕೀಳುಮಟ್ಟದ ರಾಜಕೀಯ ಬೇಡ ಎಂದು ಪ್ರತಿಕ್ರಿಯಿಸಿದ್ದಾರೆ.