ಮಂಗಳೂರು, ಮೇ03(Daijiworld News/SS): ಕರಾವಳಿಯ ಇತಿಹಾಸ ಪ್ರಸಿದ್ಧ ಕ್ಷೇತ್ರಗಳಲ್ಲಿ ಒಂದಾದ ಶ್ರೀ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕೃಷ್ಣ ಸರ್ಪವೊಂದು ಪ್ರೇಕ್ಷಕರ ಕಣ್ಣಿಗೆ ಕಾಣಸಿಕ್ಕಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕಟೀಲು ದುರ್ಗಾ ಪರಮೇಶ್ವರಿ ಕ್ಷೇತ್ರದ ರಥಬೀದಿಯಲ್ಲಿ ಶ್ರೀ ಕೃಷ್ಣ ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದ ಸಂದರ್ಭದಲ್ಲಿ ಕೃಷ್ಣ ಸರ್ಪ ಹಾವು ಕಾಣಿಸಿಕೊಂಡಿದ್ದು, ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ.
ಕಟೀಲು ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮೇಳದಿಂದ ಕ್ಷೇತ್ರದ ರಥಬೀದಿಯಲ್ಲಿ ಶ್ರೀ ಕೃಷ್ಣ ಯಕ್ಷಗಾನ ಪ್ರಸಂಗವನ್ನು ಆಯೋಜಿಸಲಾಗಿತ್ತು. ಈ ವೇಳೆ ಕೃಷ್ಣ ಸರ್ಪ ಕಾಣಿಸಿಕೊಂಡಿದೆ.
ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದ ಸಂಧರ್ಭ ರಂಗಸ್ಥಳದ ಬಳಿಗೆ ಹಾವು ಬಂದಿದ್ದು, ದೇವಸ್ಥಾನದ ಅರ್ಚಕರ ಮೂಲಕ ತೀರ್ಥ, ಗಂಧ ಸಂಪ್ರೋಕ್ಷಣೆ ಮಾಡಿ ಬಳಿಕ ಕಾಡಿಗೆ ಬಿಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಬಗ್ಗೆ ದೇವಾಲಯದ ಆಡಳಿತ ಮಂಡಳಿ ಜೊತೆ ವಿಚಾರಿಸಿದಾಗ, ಸಾಮಾನ್ಯವಾಗಿ ಹಾವುಗಳು ಬರುತ್ತಿರುತ್ತವೆ ಎಂದು ತಿಳಿಸಿದ್ದಾರೆ.