ಮಂಗಳೂರು,ಮೇ06(DaijiworldNews/AZM):ಮೀನಿನ ಅಭಾವದಿಂದ ಲಂಗರು ಹಾಕಿದ್ದ ಮೀನುಗಾರಿಕಾ ಬೋಟೊಂದು ಸಮುದ್ರ ಪಾಲಾದ ಘಟನೆ ಮೇ.6ರ ಸೋಮವಾರ ನಡೆದಿದೆ. ಯಾರೂ ಕಿಡಿಗೇಡಿಗಳು ಬೋಟ್ ಗೆ ಕಟ್ಟಿ ಹಾಕಿದ್ದ ಹಗ್ಗವನ್ನು ಕತ್ತರಿಸಿ ಬಿಟ್ಟಿದ್ದಾಗಿ ಶಂಕಿಸಲಾಗಿದೆ.
ಸಾಕಷ್ಟು ಮೀನು ಲಭ್ಯವಿಲ್ಲದ ಕಾರಣ ಸಮುದ್ರಕ್ಕೆ ಬೋಟ್ ಇಳಿಯದೆ ದಡದಲ್ಲಿ ಲಂಗರು ಹಾಕಲಾಗಿತ್ತು. ಆದರೆ ಯಾರೋ ಕಿಡಿಗೇಟಿಗಳು ಬೋಟಿನ ಹಗ್ಗವನ್ನು ಕತ್ತರಿಸಿ ಬಿಟ್ಟಿರಬಹುದು ಎಂದು ಶಂಕಿಸಲಾಗಿದೆ. ಪರಿಣಾಮ ಬೋಟ್ ನೀರಿನಲ್ಲಿ ತೇಲಿ ಹೋಗಿದೆ. ಅಲ್ಲದೆ ಸಮುದ್ರದಲ್ಲಿ ಸಾಕಷ್ಟು ದೂರ ತೇಲಿ ಹೋದ ಬೋಟ್ ದಂಡೆಯೊಂದಕ್ಕೆ ಸಿಲುಕಿ ಅಲ್ಲೇ ಮುಳುಗುವ ಸ್ಥಿತಿಯಲ್ಲಿ ಕಂಡುಬಂದಿದೆ. ಮೌರಿಸ್ ಎಂಬವರಿಗೆ ಸೇರಿದ ಪ್ರಾವಿಡೆನ್ಸಿ ಬೋಟ್ ಇದಾಗಿದೆ.