ಮುಲ್ಕಿ ನ 21: ಸಮುದ್ರ ಪಾಲಾಗುತ್ತಿದ್ದ ಇಬ್ಬರನ್ನು ಜೀವರಕ್ಷಕರು ರಕ್ಷಿಸಿದ ಘಟನೆ ಸಸಿಹಿತ್ಲು ಬೀಚ್ ನಲ್ಲಿ ನ ೨೦ ರ ಸೋಮವಾರ ಸಂಜೆ ನಡೆದಿದೆ. ರಕ್ಷಣೆಗೊಳಗಾದವರನ್ನು ಪಡುಬಿದ್ರಿ ಮೂಲದ ತಝೀಮ್ ಮತ್ತು ಮಸೂದ್ ಎಂದು ಗುರುತಿಸಲಾಗಿದೆ.ಇವರಿಬ್ಬರು ಹವ್ಯಾಸಿ ಮೀನುಗಾರರಾಗಿದ್ದು ಫೈಬರ್ ಬೋಟ್ ನಲ್ಲಿ ಹೆಜಮಾಡಿ ಮೂಲಕ ಬಂದು ಮೀನು ಹಿಡಿಯಲು ಗಾಳ ಹಾಕುತ್ತಿದ್ದ ವೇಳೆ ಅಲೆಯ ಹೊಡೆತಕ್ಕೆ ದಿಕ್ಕುತೋಚದಾಗಿದ್ದಾರೆ. ಇದನ್ನು ಕಂಡ ಸ್ಥಳೀಯ ಬೀಚ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಜೀವ ರಕ್ಷಕರ ತಂಡವು ಇಬ್ಬರನ್ನು ಬೋಟ್ ಸಹಿತ ರಕ್ಷಿಸಿದ್ದಾರೆ. ಜೀವ ರಕ್ಷಕ ತಂಡದಲ್ಲಿ ಮನೋಜ್ ಸಸಿಹಿತ್ಲು, ಅನಿಲ್ ಕಾಂಚನ್, ದಿಲೀಪ್, ಜಗದೀಶ್ ಹಾಗೂ ಹಳೆಯಂಗಡಿ ಗ್ರಾ.ಪಂ. ಸದಸ್ಯ ಚಂದ್ರಕುಮಾರ್ ಇದ್ದರು.ಯಾವುದೇ ಪ್ರಾಣಾಪಾಯವಿಲ್ಲದೆ ಇಬ್ಬರನ್ನು ರಕ್ಷಿಸಿದ ಜೀವ ರಕ್ಷಕರಿಗೆ ಸ್ಥಳೀಯರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.