ಬಂಟ್ವಾಳ,ಮೇ 08 (Daijiworld News/MSP): ಬೈಕ್ ಹಾಗೂ ಟಿಪ್ಪರ್ ಮುಖಾಮುಖಿಯಾಗಿ ಢಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ದಾರುಣವಾಗಿ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಅಣ್ಣಳಿಕೆ-ಕರ್ಪೆ ರಸ್ತೆ ನಡುವಿನ ಕುಮೇರು ಎಂಬಲ್ಲಿ ಮೇ 8 ರ ಬುಧವಾರ ನಡೆದಿದೆ.
ಸಿದ್ದಕಟ್ಟೆ ಕಡೆಯಿಂದ ಹೋಗುತ್ತಿದ್ದ ಟಿಪ್ಪರ್ ಲಾರಿಯು ಅಣ್ಣಳಿಕೆ ಕಡೆಯಿಂದ ಬರುತ್ತಿದ್ದ ದ್ವಿಚಕ್ರ ವಾಹಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬುಲೆಟ್ ಬೈಕ್ ಸವಾರ ಸ್ಥಳೀಯ ನಿವಾಸಿ ರಮೇಶ ಪೂಜಾರಿ ಎಂಬವರ ಪುತ್ರ ಸುರೇಂದ್ರ (33) ಮತ್ತು ಸಹ ಸವಾರಿ ಮೖತರ ಸಂಬಂಧಿ ಮಹಿಳೆ ಜಯಲಕ್ಷ್ಮಿ (36) ಗಂಭೀರ ಗಾಯಗೊಂಡಿದ್ದು ಆಸ್ಪತೆಗೆ ಸಾಗಿಸುತ್ತಿದ್ದ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಅಪಘಾತದ ಸ್ಥಳಕ್ಕೆ ಆಗಮಿಸಿದ ಬಂಟ್ವಾಳ ಸಂಚಾರಿ ಠಾಣೆ ಎಸೈ ಮಂಜುನಾಥ, ಎಎಸೈ ಎಂ.ಕೆ.ಕುಟ್ಟಿ ನೇತೃತ್ವದ ಪೊಲೀಸರ ತಂಡ ಸ್ಥಳ ಮಹಜರು ನಡೆಸಿದ್ದಾರೆ.