ಉಡುಪಿ, ಮೇ08(Daijiworld News/SS): ಇಲ್ಲಿನ ಮಠಗಳಿಗೆ ಶಿಷ್ಯ ಸ್ವೀಕಾರ ವಿಚಾರವಾಗಿ ಅಪಸ್ವರಗಳು ಕೇಳಿಬರುತ್ತಿದ್ದು, ಇದರ ವಿರುದ್ಧ ಪೇಜಾವರ ಮಠದಿಂದ 30 ವರ್ಷಗಳ ಹಿಂದೆ ಪೀಠ ತ್ಯಾಗ ಮಾಡಿ ಹೊರಟು ಹೋಗಿದ್ದ ಕಿರಿಯ ಯತಿ ವಿಶ್ವ ವಿಜಯ ತೀರ್ಥ ಸ್ವಾಮೀಜಿ ಕೋರ್ಟ್ ಮೆಟ್ಟಲೇರಿದ್ದಾರೆ.
ಕಳೆದ ಕೆಲ ತಿಂಗಳ ಹಿಂದೆ ಕೃಷ್ಣ ನಗರಿ ಉಡುಪಿಯ ಅಷ್ಟಮಠಗಳಲ್ಲೊಂದಾದ ಪುತ್ತಿಗೆ ಮಠಕ್ಕೆ ತಮ್ಮ ಉತ್ತರಾಧಿಕಾರಿಯಾಗಿ ಉಡುಪಿಯ ಪ್ರಶಾಂತ ಆಚಾರ್ಯ (29) ಇವರನ್ನು ಸ್ವೀಕರಿಸಿದ ಶ್ರೀಸುಗುಣೇಂದ್ರತೀರ್ಥರು, ಆತನನ್ನು ತಮ್ಮ ಶಿಷ್ಯನಾಗಿ ಸ್ವೀಕರಿಸಿ, ಸನ್ಯಾಸದೀಕ್ಷೆ ನೀಡಿ ಶ್ರೀಸುಶ್ರೀಂದ್ರತೀರ್ಥರೆಂದು ನಾಮಕರಣ ಮಾಡಿದ್ದರು.
ಹಿರಿಯಡ್ಕ ಸಮೀಪದ ಪುತ್ತಿಗೆಯಲ್ಲಿರುವ ಶ್ರೀಪುತ್ತಿಗೆ ಮೂಲಮಠದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆಸಿ ಪ್ರಶಾಂತ್ ಆಚಾರ್ಯರ ಸನ್ಯಾಸ ಸ್ವೀಕಾರ ಹಾಗೂ ಪಟ್ಟಾಭಿಷೇಕ ಕಾರ್ಯಕ್ರಮಗಳು ಕೆಲ ತಿಂಗಳ ಹಿಂದೆಯಷ್ಟೇ ವೈಭವದಿಂದ ನಡೆದಿದ್ದವು. ಮಾತ್ರವಲ್ಲ, ಪುತ್ತಿಗೆ ಮಠದ ಕಿರಿಯ ಯತಿಗೆ ಶ್ರೀಸುಶ್ರೀಂದ್ರ ತೀರ್ಥರೆಂದು ಶ್ರೀಸುಗುಣೇಂದ್ರತೀರ್ಥರು ನಾಮಕರಣ ಮಾಡಿದ್ದರು.
ಈ ವಿಚಾರದ ವಿರುದ್ಧ ಪೇಜಾವರ ಮಠದಿಂದ 30 ವರ್ಷಗಳ ಹಿಂದೆ ಪೀಠ ತ್ಯಾಗ ಮಾಡಿ ಹೊರಟು ಹೋಗಿದ್ದ ಕಿರಿಯ ಯತಿ ವಿಶ್ವ ವಿಜಯ ತೀರ್ಥ ಸ್ವಾಮೀಜಿ ಕೋರ್ಟ್ ಮೆಟ್ಟಲೇರಿದ್ದಾರೆ.
ಉತ್ತರಾಧಿಕಾರಿಯಾಗುವ ಯಾವುದೇ ಅರ್ಹತೆ ಇಲ್ಲದವರಿಗೆ ಶಿಷ್ಯತ್ವ ನೀಡುತ್ತಿದ್ದಾರೆ. ಸನ್ಯಾಸ ಧೀಕ್ಷೆಯನ್ನು ವೇದಾಂತಗಳ ತಿಳುವಳಿಕೆ ಇಲ್ಲದವರಿಗೆ ಕೊಡುವುದು ಸರಿಯಲ್ಲ. ವೇದಗಳ ಜ್ಞಾನವಿಲ್ಲದವರು ಉತ್ತರಾಧಿಕಾರಿಯಾಗಲು ಅನರ್ಹರು ಎಂದು ಹೇಳಿದ್ದಾರೆ.