ಉಡುಪಿ, ಮೇ 09 (Daijiworld News/MSP): ಸಮುದ್ರದಲ್ಲಿ ಮುಳುಗಿರುವ 'ಸುವರ್ಣ ತ್ರಿಭುಜ' ಮೀನುಗಾರಿಕಾ ದೋಣಿಯ ಚಿತ್ರಗಳನ್ನು ಭಾರತೀಯ ನೌಕಾಪಡೆ ಬಿಡುಗಡೆ ಮಾಡಿದೆ.ಬೋಟ್ ಮೇಲೆ ಮೀನುಗಾರಿಕಾ ಬಲೆ ಹರಡಿಕೊಂಡಿದೆ
ಡಿ.15ರಂದು ಮಲ್ಪೆಯಿಂದ ಹೊರಟಿದ್ದ ದೋಣಿಯಲ್ಲಿ ಏಳು ಮೀನುಗಾರರಿದ್ದರು. ತಿಂಗಳುಗಳೇ ಕಳೆದರೂ ದೋಣಿ ಹಾಗೂ ಮೀನುಗಾರರ ಸುಳಿವು ಸಿಕ್ಕಿರಲಿಲ್ಲ. ಹೀಗಾಗಿ, ನೌಕಾಪಡೆಯ ಸಹಾಯ ಪಡೆದು ಶೋಧ ಕಾರ್ಯ ನಡೆಸಿದಾಗ ಮೇ 3ರಂದು ಮಹಾರಾಷ್ಟ್ರದ ಮಾಲ್ವಾನ್ ಬಳಿ ಸಮುದ್ರದಲ್ಲಿ ದೋಣಿಯ ಅವಶೇಷಗಳು ಪತ್ತೆಯಾದವು. ನೌಕಾಪಡೆಯ ಮುಳುಗುತಜ್ಞರು, ಸಮುದ್ರ ದಡದಿಂದ 33 ಕಿ.ಮೀ ದೂರದಲ್ಲಿ ದೋಣಿಯ ಅವಶೇಷಗಳು ಇರುವುದನ್ನು ಖಚಿತಪಡಿಸಿದ್ದರು. ಆ ಸಂದರ್ಭದಲ್ಲಿ ದೋಣಿ ಶೋಧಕಾರ್ಯದ ವಿಡಿಯೊ ಚಿತ್ರೀಕರಣ ಮತ್ತು ಫೋಟೊ ತೆಗೆಯಲಾಗಿತ್ತು. ದೋಣಿ ಮಾತ್ರ ಪತ್ತೆಯಾಗಿದ್ದು, ಕಾಣೆಯಾಗಿರುವ ಏಳು ಮಂದಿ ಮೀನುಗಾರರ ಸುಳಿವು ಇನ್ನೂ ಸಿಕ್ಕಿಲ್ಲ.