ಶ್ರೀನಗರ, ನ 21: ಪಾಕಿಸ್ತಾನಿ ಲಷ್ಕರೆ ತಯ್ಬಾಮೂಲದ ಮೂವರು ಉಗ್ರರನ್ನು ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಇಂದು ಎನ್ಕೌಂಟರ್ ಮಾಡಿ ಹತ್ಯೆ ಮಾಡಲಾಗಿದೆ.
ಪಾಕಿಸ್ತಾನಿ ಮೂಲದ ಉಗ್ರರು ಕುಪ್ವಾರ ಜಿಲ್ಲೆಯ ಮಾಗಂ ಪ್ರದೇಶದಲ್ಲಿ ಅಡಗಿಕೊಂಡಿದ್ದರು. ಈ ಬಗ್ಗೆ ಮಾಹಿತಿ ಪಡೆದ ಸಿಆರ್ಪಿಎಫ್, ರಾಜ್ಯ ಪೊಲೀಸರು ಮತ್ತು ಭಾರತೀಯ ಸೇನೆ ಜಂಟಿ ಕಾರ್ಯಾಚರಣೆ ನಡೆಸಿ ಉಗ್ರರನ್ನು ಕೊಂದು ಹಾಕಿವೆ.
ಉಗ್ರರುಅಡಗಿಕೊಂಡಿರುವಮಾಹಿತಿಪಡೆದ ಭದ್ರತಾಪಡೆಗಳುನಿನ್ನೆಮಧ್ಯರಾತ್ರಿಯಿಂದಲೇ ಕಾರ್ಯಾಚರಣೆನಡೆಸಿದೆ. ಎನ್ ಕೌಂಟರ್ ಮಾಡುವ ಮೊದಲು ಶರಣಾಗುವಂತೆ ಉಗ್ರರಿಗೆ ಸೂಚಿಸಿದ್ದರು. ಆದರೆ ಉಗ್ರರು ಶರಣಾಗಿರಲಿಲ್ಲ. ಬದಲಾಗಿ ಉಗ್ರರು ಗುಂಡಿನ ಮೂಲಕ ಉತ್ತರಿಸಿದರು.
ಹೀಗಾಗಿ ಪ್ರತಿದಾಳಿ ನಡೆಸುವುದು ಯೋಧರಿಗೆ ಅನಿವಾರ್ಯವಾಯಿತು. ಪ್ರತಿದಾಳಿ ನಡೆಸಿದ ಯೋಧರು ಮೂವರು ಉಗ್ರರನ್ನು ಹತ್ಯೆ ಮಾಡಿದ್ದಾರೆ. ಉಗ್ರರಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.