ಉಡುಪಿ, ಮೇ 10 (Daijiworld News/MSP): ಕೃಷ್ಣಮಠದ ಸರ್ವಜ್ಞ ಪೀಠದಲ್ಲಿ ಶ್ರೀ ಪಲಿಮಾರು ಮಠದ ಉತ್ತರಾಧಿಕಾರಿಯಾಗಿ ನಿಯೋಜಿಸಲ್ಪಟ್ಟ ಕಂಬ್ಲಕಟ್ಟ 'ಶ್ರೀಶೈಲೇಶ ಉಪಾದ್ಯಾಯ' ಎಂಬ ವಟುವಿಗೆ ಬ್ರಹ್ಮಮುಹೂರ್ತ ಬೆಳಿಗ್ಗೆ 5.57 ಗಂಟೆಗೆ ಪ್ರಣವೋಪದೇಶಪುರಸ್ಸರ ಸನ್ಯಾಸ ಧೀಕ್ಷೆಯನ್ನು ಪರ್ಯಾಯ ಶ್ರೀ ಪಲಿಮಾರು ಮಠಾಧೀಶರಾದ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು ಪೇಜಾವರ ಕಿರಿಯ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ನೀಡಿದರು.
ಪೂರ್ವಭಾವಿಯಾಗಿ ಶಾಕಾಲ ಹೋಮ, ಜಾಗರಣೆಯ ಸಮಯದಲ್ಲಿ ಭಾಗವತ ಶ್ರವಣ,ವಿರಜಾ ಮಂತ್ರ ಹೋಮ ಮೊದಲಾದ ಧಾರ್ಮಿಕ ವಿಧಿಗಳನ್ನು ವಿದ್ವಾಂಸರಾದ ಗುಂಡಿಬೈಲ್ ಸುಬ್ರಹ್ಮಣ್ಯ ಭಟ್ ಹಾಗೂ ವೈಧಿಕ ವೃಂದದವರು ನಡೆಸಿ ಕೊಟ್ಟರು.ಈ ಸಂದರ್ಭದಲ್ಲಿ ವಿದ್ವಾಂಸರಾದ ಕೊರ್ಲಳ್ಳಿ ವೆಂಕಟೀಶ ಆಚಾರ್ಯ,ರಾಜಗೋಪಾಲ ಆಚಾರ್ಯ,ವಾಸುದೇವ ಉಪಾಧ್ಯಾಯ,ಗಿರೀಶ ಉಪಾಧ್ಯಾಯ ಮತ್ತು ವಟುವಿನ ಮಾತಾ ಪಿತೃಗಳು ಹಾಗೂ ಕುಟುಂಬಿಕರು ಮೊದಲಾದವರು ಉಪಸ್ಥಿತರಿದ್ದರು.
ಸನ್ಯಾಸ ದೀಕ್ಷೆಯ ಪೂರ್ವಭಾವಿ ಕಾರ್ಯಕ್ರಮದಲ್ಲಿ ಪರ್ಯಾಯ ಶ್ರೀಪಾದರಿಂದ ಅನುಗ್ರಹ ಮಂತ್ರ್ರಕ್ಷತೆ ಪಡೆದು ಶ್ರೇಯಪ್ರಾಪ್ತಿಗಾಗಿ ಗಣಹೋಮ,ಬ್ರಹ್ಮಕೂರ್ಚ,ತಿಲಹೋಮ,ಕೂಷ್ಮಾಂಡ ಹೋಮ,ಪವಮಾನ ಹೋಮ,ನವಗ್ರಹ ಹೋಮ,ಸಂಜೀವಿನಿ ಮೃತ್ಯುಂಜಯ ಮೊದಲಾದ ಸರ್ವಪ್ರಾಯಶ್ಚಿತ್ತ ಹೋಮಗಳನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ವಟುವಿನ ಮಾತಾ ಪಿತೃಗಳು ಹಾಗೂ ಕುಟುಂಬಿಕರು ಉಪಸ್ಥಿತರಿದ್ದರು.
ಈ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಕೇಶಮುಂಡನ ಹಾಗೂ ಮಧ್ವಸರೋವರದಲ್ಲಿ ದಶವಿಧ ಪವಿತ್ರಸ್ನಾನ ನಡೆಯಿತು. ಸನ್ಯಾಸ ಧೀಕ್ಷೆಯ ಧಾರ್ಮಿಕ ಕಾರ್ಯಕ್ರಮದ ಪ್ರಮುಖ ಅಂಗವಾಗಿ ಸರ್ವಜ್ನ ಪೀಠದಲ್ಲಿ ಪರ್ಯಾಯ ಸ್ವಾಮೀಜಿಯವರಿಂದ ಪ್ರಣವೋಪದೇಶವು ನಡೆಯಿತು. ಗುರುವಾರ ಸಾಮಾನ್ಯ ವಸ್ತ್ರ ಧಾರಿಯಾಗಿದ್ದ ಅವರು ಶುಕ್ರವಾರ ಕಷಾಯ ವಸ್ತ್ರ ಧರಿಸಿದರು
ಸನ್ಯಾಸ ಧೀಕ್ಷೆಯ ಪೂರ್ವಭಾವಿಯಾಗಿ ಶಾಕಾಲ ಹೋಮ,ಜಾಗರಣೆಯ ಸಮಯದಲ್ಲಿ ಭಾಗವತ ಶ್ರವಣ,ವಿರಜಾ ಮಂತ್ರ ಹೋಮ ಮೊದಲಾದ ಧಾರ್ಮಿಕ ವಿಧಿಗಳನ್ನು ವಿದ್ವಾಂಸರಾದ ಗುಂಡಿಬೈಲ್ ಸುಬ್ರಹ್ಮಣ್ಯ ಭಟ್ ಹಾಗೂ ವೈಧಿಕ ವೃಂದದವರು ನಡೆಸಿ ಕೊಟ್ಟರು.
ಶನಿವಾರ ವಾಯು ಸ್ತುತಿ ಪುಶ್ಚರಣೆ, ವಿವಿಧ ಹೋಮಗಳನ್ನು ನಡೆಸಲಾಗುತ್ತೆ. ಭಾನುವಾರ ಶೈಲೇಶ್ ರನ್ನು ಇತರ ಮಠಾಧೀಶರ ಉಪಸ್ಥಿತಿಯಲ್ಲಿ ಪಲಿಮಾರು ಮಠದ ಉತ್ತರಾಧಿಕಾರಿಯನ್ನಾಗಿ ನೇಮಿಸಲಾಗುತ್ತ ದೆ. ಈ ಪ್ರಕ್ರಿಯೆಯಲ್ಲಿ ಶತಮಾನಗಳಿಂದ ಪೂಜೆ ಗೊಂಡ ಸಾಲಿಗ್ರಾಮ, ವಿಗ್ರಹಗಳನ್ನು ಹರಿವಾಣದಲ್ಲಿ ಸ್ಮರಿಸಿ ಅದನ್ನು ವಟುವಿನ ತಲೆಯ ಮೇಲೆ ಇತ್ತು ಪರ್ಯಾಯ ಪಲಿಮಾರಿನ ಶ್ರೀಗಳು ಅಭಿಷೇಕ ಮಾಡಿ, ದೇಹ ಪೂರ್ತಿ ನೆನೆದ ಬಳಿಕ ಅವರು ಪಲಿಮಾರು ಮಠದ ಕಿರಿಯ ಮಠಾಧಿಪತಿ ಎನಿಸಿಕೊಳ್ಳುತ್ತಾರೆ