ಬೆಳಗಾವಿ, ನ 21: ಕರ್ನಾಟಕ ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧಿಸುವುದು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮದ್ಯ ನಿಷೇಧದ ಕುರಿತು ರಾಷ್ಟ್ರೀಯ ನೀತಿ ರೂಪಿಸುವಂತೆ ಮನವಿ ಮಾಡಿ ಎಂದು ಬಿಜೆಪಿಗೆ ಸಲಹೆ ನೀಡಿದರು. ಮದ್ಯ ನಿಷೇಧದ ಕುರಿತು ರಾಷ್ಟ್ರೀಯ ನೀತಿ ರೂಪಿಸಿದರೆ, ಕರ್ನಾಟಕ ಅದನ್ನು ಬೆಂಬಲಿಸಲಿದೆ ಎಂದು ಹೇಳಿದರು.
ಬಿಜೆಪಿ ಮದ್ಯ ಮಾರಾಟದ ಮೇಲೆ ಪೂರ್ಣ ನಿಷೇಧ ಹೇರುವ ಕುರಿತು ಬೇಡಿಕೆ ಇಟ್ಟಿತ್ತು. ಈ ಬೇಡಿಕೆಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ಗುಜರಾತ್ ನಲ್ಲಿಯೂ ಮದ್ಯ ನಿಷೇಧ ಯಶಸ್ವಿಯಾಗಿಲ್ಲ. ಅದೆಷ್ಟು ಪರಿಣಾಮಕಾರಿಯಾಗಿ ಮದ್ಯ ಮಾರಾಟನಿಷೇಧ ಅನುಷ್ಟಾನಗೊಂಡಿದೆ ಎಂಬುದನ್ನೂ ಸ್ವತಃ ಪರಿಶೀಲಿಸಿ. ಮದ್ಯ ನಿಷೇಧದ ನಿರ್ಧಾರವು ಎಲ್ಲಿಯೂ ಯಶಸ್ವಿಯಾವುದಿಲ್ಲ ಎಂದು ಹೇಳಿದರು.