ಕೋಟ, ಮೇ 10 (Daijiworld News/MSP): ಕಳೆದ ವಾರವಷ್ಟೇ ಕಾಪು ತಾಲೂಕಿನ ಮೂಳೂರಿನಲ್ಲಿ ಪ್ರಕೃತಿ ಚಿಕಿತ್ಸೆ ಪಡೆದು ತೆರಳಿದ್ದ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರು ಆಯುರ್ವೇದ ವೈದ್ಯರ ಸೂಚನೆಯಂತೆ ಪತ್ನಿ ಚೆನ್ನಮ್ಮ ಸಮೇತ ಮತ್ತೆ ಗುರುವಾರ ಆಗಮಿಸಿ ಸಾಯಿರಾಧಾ ರೆಸಾರ್ಟಿನಲ್ಲಿ ಮಾಜಿ ಪ್ರಧಾನಿ ದೇವೇಗೌಡ ದಂಪತಿ ಪ್ರಕೃತಿ ಚಿಕಿತ್ಸೆ ಮುಂದುವರಿಸಿದ್ದಾರೆ.
ಈ ನಡುವೆ ದೇವೇಗೌಡರು ಮತ್ತು ಪತ್ನಿ ಚೆನ್ನಮ್ಮ ಸ್ಥಳೀಯ ದೇವಸ್ಥಾನ ಪ್ರಸಿದ್ದ ಕೋಟ ಅಮೃತೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು.
ಮಧ್ಯಾಹ್ನದ ಮಹಾಪೂಜೆ ವೇಳೆ ತೆರಳಿದ ದಂಪತಿಗಳು ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಇದೇ ವೇಳೆ ಮೊಮ್ಮಗನ ಮದುವೆ ಆಮಂತ್ರಣ ಪತ್ರಿಕೆ ಇಟ್ಟು ಪೂಜೆ ಸಲ್ಲಿಸಿದ್ದಾರೆ. ಈ ವಿವಾಹ ಅಮಂತ್ರಣ ಪತ್ರಿಕೆ ದೇವೇಗೌಡರ ಪುತ್ರಿ ಶೈಲಜ ಅವರ ಮಗ ಡಾ. ಅಮೋಘ್ ಅವರದ್ದಾಗಿದೆ.
ಮೇ 16ರ ವರೆಗೆ ಕಾಪುವಿನಲ್ಲಿ ಚಿಕಿತ್ಸೆಗಾಇ ತಂಗಲಿರುವ ದೇವೇಗೌಡ ದಂಪತಿ ಉಡುಪಿಯ ಧಾರ್ಮಿಕ ಕ್ಷೇತ್ರಗಳ ಪ್ರವಾಸ ಮಾಡಲಿದ್ದಾರೆ. ದೇವೇಗೌಡರಿಗೆ ಡಾ| ತನ್ಮಯ್ ಗೋಸ್ವಾಮಿ ನೇತೃತ್ವದ ತಂಡ ಚಿಕಿತ್ಸೆ ನೀಡುತ್ತಿದ್ದಾರೆ.