ಉಳ್ಳಾಲ, ನ 21 : ಇಲ್ಲಿ ನಗರ ಪಂಚಾಯಿತಿ ವ್ಯಾಪ್ತಿಯಲ್ಲಿ ನ 19 ರಂದು ಸ್ವಚ್ಚತಾ ಅಭಿಯಾನದಡಿ ಸ್ವಚ್ಚತಾ ಕಾರ್ಯ ನಡೆದಿದ್ದು, ಈ ಸಂದರ್ಭದಲ್ಲಿ ತೊಕ್ಕೊಟ್ಟು ಬಸ್ಸು ನಿಲ್ದಾಣದ ಬಳಿ ಆರು ಪರ್ಸ್ ದೊರೆತಿತ್ತು. ಮೊದಲು ಇದನ್ನು ಯಾರೋ ಬಳಸಿ ಬಿಸಾಕಿದ್ದು ಅಂದುಕೊಂಡಿದ್ದರು ಸ್ವಚ್ಚತಾ ಕಾರ್ಯ ಮಾಡಿದವರು. ಆದರೆ ಬಳಿಕ ಅದರಲ್ಲಿ ಅಧಾರ್ ಕಾರ್ಡ್ , ಎಟಿಎಂ ಕಾರ್ಡ್ ನಂತಹ ಗುರುತಿನ ಚೀಟಿ ಬಿಟ್ಟರೆ ಬೇರೆ ಯಾವ ಅಮೂಲ್ಯ ವಸ್ತುಗಳಿಲ್ಲದಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿತ್ತು. . ಆರು ಪರ್ಸ್ ಗಳಲ್ಲಿ ಒಂದು ಲತಾ ಕೋಡಿಕಲ್, ಮತ್ತು ರಾಧಾಕೃಷ್ಣ ಅವರದಾಗಿತ್ತು. ಇವರ ಪರ್ಸ್ ದೇರಳೆಕಟ್ಟೆ ಖಾಸಗಿ ಆಸ್ಪತ್ರೆಗೆ ಬಂದು ವಾಪಸ್ಸಾಗುವ ವೇಳೆ ಮಾರ್ಗ ಮಧ್ಯೆ ತೊಕ್ಕೊಟ್ಟು ಬಳಿ ಪರ್ಸ್ ಕಣ್ಮರೆಯಾಗಿತ್ತು . ಒಂದು ಮೊಬೈಲ್ ಹಾಗೂ ಅಲ್ಪ ಪ್ರಮಾಣದ ನಗದು ಇದ್ದದ್ದರಿಂದ ಮಾಲೀಕರು ಪೊಲೀಸ್ ಕೇಸ್ ದಾಖಲಿಸಿರಲಿಲ್ಲ. ಇನ್ನುಳಿದ 5 ಪರ್ಸ್ ಗಳ ವಾರೀಸುದಾರರು ಲಭ್ಯವಾಗಿಲ್ಲ.
ದೊರೆತ ದಾಖಲೆ ಪರಿಶೀಲಿಸಿ ಭಗತ್ ಸಿಂಗ್ ಪ್ರತಿಷ್ಟಾನದ ಅಧ್ಯಕ್ಷ ಜೀವನ್ ಕುಮಾರ್ ತೊಕ್ಕೊಟ್ಟು , ನಿವೃತ್ತ ಪೊಲೀಸ್ ಅಧಿಕಾರಿ ಬಾಲಕೃಷ್ಣ ಗೌಡ ವಾರಸುದಾರರಿಗೆ ಒಪ್ಪಿಸುವಾಗ ಪಿಕ್ ಪಾಕೆಟ್ ಸಾಧ್ಯತೆ ದೃಡವಾಗಿದೆ. ಈ ಘಟನೆಯಿಂದ ತೊಕ್ಕೊಟ್ಟು ವ್ಯಾಪ್ತಿಯಲ್ಲಿ ಪಿಕ್ ಪಾಕೆಟ್ ಜಾಲ ಸಕ್ರೀಯವಾಗಿರುವುದು ನಿಚ್ಚಲವಾಗಿದೆ. ಪ್ರತಿ ದಿನ ಮರದಡಿ ಕುಳಿತುಕೊಳ್ಳುವ ಮಹಿಳೆಯರ ತಂಡ ಈ ಕೃತ್ಯದಲ್ಲಿ ತೊಡಗಿರುವ ಬಗ್ಗೆ ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ. ಪೊಲೀಸರು ಸೂಕ್ತ ಕಾರ್ಯಚರಣೆ ನಡೆಸಿದರೆ ಈ ತಂಡ ಬಲೆಗೆ ಬೀಳಲು ಸಾದ್ಯ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.