ಬಂಟ್ವಾಳ ನ 21 : ಇಲ್ಲಿನ ಅಮ್ಟಾಡಿ ಎಂಬಲ್ಲಿ ಯುವತಿಯೊರ್ವಳನ್ನು ಮದುವೆಯಾಗುವಂತೆ ನಿರಂತರವಾಗಿ ಪೀಡಿಸುತ್ತಿದ್ದ ಯುವಕನೊಬ್ಬನನ್ನು ಬಂಟ್ವಾಳ ಪೊಲೀಸರು ಮಂಗಳವಾರ ಮದ್ಯಾಹ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಅಮ್ಟಾಡಿಯ ಅನಿಲ್ ಪಿಂಟೋ ಪಲೀಸ್ ವಶದಲ್ಲಿರುವ ಯುವಕ. ಈತ ಸ್ಥಳೀಯ ಯುವತಿಯನ್ನು ದಾರಿಯಲ್ಲಿ ತಡೆದು ನಿಲ್ಲಿಸಿ ತನ್ನನ್ನು ಮದುವೆಯಾಗುವಂತೆ ನಿತ್ಯವೂ ಪೀಡಿಸುತ್ತಿದ್ದ ಎನ್ನಲಾಗಿದೆ. ಇದನ್ನು ಪ್ರಶ್ನಿಸಿದ ಆಕೆಗೆ ಹಾಗೂ ಆಕೆಯ ಮನೆಯವರಿಗೂ ಕೊಲೆ ಬೆದರಿಕೆ ಹಾಕಿದ್ದಾನೆಂದು ಆರೋಪಿಸಲಾಗಿದೆ.ಯುವತಿಯ ಮನೆಯವರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿರುವ ಬಂಟ್ವಾಳ ನಗರ ಪೊಲೀಸರು ಅನಿಲ್ ಪಿಂಟೋನನ್ನು ವಶಕ್ಕೆ ತೆಗೆದು ವಿಚಾರಣೆ ನಡೆಸಿದ್ದಾರೆಂದು ತಿಳಿದು ಬಂದಿದೆ.