ಮಂಗಳೂರು,ಮೇ12(DaijiworldNews/AZM):ಮಂಗಳೂರಿನಲ್ಲಿ ನಡೆದ ಬರ್ಬರ ಹತ್ಯೆಯ ಮಹಿಳೆಯ ಗುರುತು ಪತ್ತೆಯಾಗಿದೆ. ಮೃತ ಮಹಿಳೆಯನ್ನು ಶ್ರೀಮತಿ ಶೆಟ್ಟಿ ಎಂದು ಗುರುತಿಸಲಾಗಿದೆ.
ಸುಮಾರು 35ರಿಂದ 40 ವರ್ಷದೊಳಗಿನ ಮಹಿಳೆ ಈಕೆಯಾಗಿದ್ದು, ತನ್ನ ಪತಿಗೆ ವಿವಾಹ ವಿಚ್ಛೇದನ ನೀಡಿದ್ದರು. ಪತಿಯ ಮೇಲೆ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣದ ಮೇಲೆ ಕೇಸು ದಾಖಲಾಗಿದೆ.
ಇಂದು ಬೆಳಿಗ್ಗೆ ಮಂಗಳೂರಿನ ಕೆಪಿಟಿ ಬಳಿ ಹೆಲ್ಮೆಟ್ ಒಳಗೆ ಮಹಿಳೆಯ ರುಂಡ ಹಾಗೂ ಗೋಣಿ ಚೀಲದಲ್ಲಿ ದೇಹದ ಅರ್ಧ ಭಾಗ ಪತ್ತೆಯಾಗಿತ್ತು. ಇನ್ನು ಮೃತದೇಹದ ಮತ್ತಷ್ಠು ಭಾಗ ಗೋಣಿ ಚೀಲದಲ್ಲಿ ನಂದಿಗುಡ್ಡೆಯ ರಸ್ತೆ ಬದಿಯಲ್ಲಿ ಪತ್ತೆಯಾಗಿತ್ತು.
ಮೃತದೇಹದ ಪೋಸ್ಟ್ ಮರ್ಟಮ್ ನಡೆದಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.