ಸುಳ್ಯ, ಜೂ 20 (DaijiworldNews/MS): ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಕಾಂತಮಂಗಲ ಶಾಲೆಯಲ್ಲಿ ಕಲ್ಲು ಎತ್ತಿ ಹಾಕಿ ವ್ಯಕ್ತಿಯೊಬ್ಬ ತನ್ನ ಜತೆಗಿದ್ದ ವ್ಯಕ್ತಿಯನ್ನು ಕೊಲೆ ಮಾಡಿದ ಹಿನ್ನಲೆಯಲ್ಲಿ ಶಾಲೆಯಲ್ಲಿ 90 ವಿದ್ಯಾರ್ಥಿಗಳ ಪೈಕಿ ಕೇವಲ 16 ವಿದ್ಯಾರ್ಥಿಗಳು ಮಾತ್ರ ಶಾಲೆಗೆ ಹಾಜರಾಗಿದ್ದಾರೆ.

ಮೂಲತ ವಿರಾಜ ಪೇಟೆಯ ವಸಂತ ಹಾಗೂ ಕಡಬ ತಾಲೂಕಿನ ಉದಕುಮಾರ ನಾಯ್ಕ ಎಂಬರು ಸುಳ್ಯದ ವೈನ್ ಶಾಪ್ ಒಂದರಲ್ಲಿ ಮಧ್ಯ ಸೇವಿಸಿ ಬಳಿಕ ಕಾಂತಮಂಗಲದ ಜಗುಲಿಯಲ್ಲಿ ಬಂದು ಮಲಗಿದ್ದರು.
ನಂತರ ಅವರ ಇಬ್ಬರ ನಡುವೆ ಜಗಳವಾಗಿ ಉದಯಕುಮಾರ ನಾಯ್ಕ ವಸಂತನ ತಲೆಗೆ ಕಲ್ಲು ಹೊತ್ತು ಹಾಕಿ ಕೊಲೆ ಮಾಡಿ ಪರಾರಿಯಾಗಿದ್ದ. ಕೊಲೆ ನಡೆದಿರುವ ಹಿನ್ನಲೆಯಲ್ಲಿ ಶಾಲೆಗೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೈರು ಹಾಜರಾಗಿರುವ ಕಾರಣ ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ತುರ್ತು ಸಭೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.