ಬಂಟ್ವಾಳ, ಜೂ 20 (DaijiworldNews/ AK): ಖಾಸಗಿ ಬಸ್ ಗಳೆರಡು ಡಿಕ್ಕಿಯಾಗಿ ಪ್ರಯಾಣಿಕರು ಅಲ್ಪಸ್ವಲ್ಪ ಗಾಯಗಳೊಂದಿಗೆ ಅಪಾಯವಿಲ್ಲದೆ ಪಾರಾದ ಘಟನೆ ತುಂಬೆ ತಿರುವಿನಲ್ಲಿ ನಡೆದಿದೆ.

ಮಂಗಳೂರು ಕಡೆಯಿಂದ ಬಸ್ ಗಳು ಪರಸ್ಪರ ಡಿಕ್ಕಿಯಾಗಿದೆ.ಮಂಗಳೂರಿನಿಂದ ಉಪ್ಪಿನಂಗಡಿಗೆ ಹೋಗುವ ಅರಫಾ ಬಸ್ ಮಂಗಳೂರಿನಿಂದ ಪುತ್ತೂರು ಕಡೆಗೆ ತೆರಳುತ್ತಿದ್ದ ಸೇಫ್ ವೇ ಬಸ್ ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ.ತುಂಬೆ ಅಪಾಯಕಾರಿ ತಿರುವಿನಿಂದ ಸ್ವಲ್ಪ ದೂರವೇ ಈ ಅಪಘಾತ ನಡೆದಿದೆ.ಎರಡು ಬಸ್ ಗಳ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ತುಂಬೆ ಈ ತಿರುವಿನಲ್ಲಿ ಕಳೆದ ವಾರದದಿಂದ ಈಚೇಗೆ ಅನೇಕ ಅಪಘಾತಗಳು ಸಂಭವಿಸಿವೆ.ಈ ತಿರುವಿನಲ್ಲಿ ಮಳೆ ನೀರು ನಿಂತಿದ್ದು, ನೀರು ಹರಿದು ಹೋಗಲು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲ .ಅನೇಕ ಬಾರಿ ತಿರುವಿನ ಬಗ್ಗೆ ಮತ್ತು ಹೊಲದಂತಾಗಿರುವ ರಸ್ತೆಯ ಬಗ್ಗೆ ಮಾಧ್ಯಮಗಳು ವರದಿ ಮಾಡಿದೆಯಾದರೂ ಇಲಾಖೆ ಯಾವುದೇ ಸ್ಪಂದಿಸುವ ಗೋಜಿಗೆ ಹೋಗಿಲ್ಲ ಎಂಬ ಆರೋಪ ಸಾರ್ವಜನಿಕರದ್ದಾಗಿದೆ.