ಕಾಸರಗೋಡು, ಜೂ.22(DaijiworldNews/AK): ಬಸ್ಸಿನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಸುಮಾರು 30 ಕಿಲೋ ಶ್ರೀಗಂಧದ ಕೊರಡನ್ನು ಮಂಜೇಶ್ವರ ಅಬಕಾರಿ ದಳದ ಸಿಬಂದಿಗಳು ವಶಪಡಿಸಿಕೊಂಡಿದ್ದು, ಓರ್ವನನ್ನು ಬಂಧಿಸಿದ್ದಾರೆ.

ಆದೂರು ಕುಂಟಾರಿನ ಸಂಶುದ್ದೀನ್ (38) ಬಂಧಿತ ಆರೋಪಿ.ಕರ್ನಾಟಕ ಕೆ ಎಸ್ ಆರ್ ಟಿ ಸಿ ಬಸ್ಸಿನಲ್ಲಿ ಸಾಗಾಟ ಮಾಡುತ್ತಿದ್ದಾಗ ಅಕ್ರಮ ಸಾಗಾಟ ಪತ್ತೆಯಾಗಿದೆ. ತಪಾಸಣೆ ನಡೆಸುತ್ತಿದ್ದಾಗ ಶ್ರೀಗಂಧದ ಕೊರಡು ಪತ್ತೆ ಯಾಗಿದ್ದು, ಹೆಚ್ಚಿನ ತನಿಖೆಗೆ ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ