ಕಣ್ಣೂರು,ಮೇ 14 (Daijiworld News/MSP): ಸುಮಾರು 8.50ಲಕ್ಷ ರೂ.ಮೌಲ್ಯದ 520 ಬಾಕ್ಸ್ ವಿದೇಶಿ ಮೂಲದ ನಿಷೇಧಿತ ಸಿಗರೇಟುಗಳನ್ನು ಕಣ್ಣೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ ಅಧಿಕಾರಿಗಳು ಮೇ.14 ರ ಮಂಗಳವಾರ ವಶಪಡಿಸಿಕೊಂಡಿದ್ದಾರೆ.
ಕಳ್ಳಸಾಗಣೆ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ, ಕಾಸಗೋಡಿನ ಮೂಲದ ಹಂಝಾ ಮೋಯ್ದೀನ್ ಕುಂಇ ಹಾಗೂ ಮೊಹಮದ್ ಅಮೀರ್ ಸುಹೈಲ್ ಅಬುಧಾಬಿಯಿಂದ ಗೋ ಏರ್ ವಿಮಾನದ ಮೂಲಕ ಕಣ್ಣೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು, ಅವರ ಬಳಿ ಇದ್ದ ಲಗೇಜ್ ನ್ನು ಪರೀಕ್ಷಿಸಿದಾಗ ವಿದೇಶಿ ಮೂಲದ ನಿಷೇಧಿತ ಸಿಗರೇಟು ಪತ್ತೆಯಾಗಿದೆ.
ಸಹಾಯಕ ಕಮೀಷನರ್ ಮಧುಸೂದನ ಭಟ್ ನೇತೃತ್ವದಲ್ಲಿ ಅಧಿಕಾರಿಗಳು ಅವರನ್ನು ಬಂಧಿಸಿ ಪ್ರಕರಣಗಳನ್ನು ದಾಖಲಿಸಿದ್ದಾರೆ.
ಕಣ್ಣೂರು ವಿಮಾನ ನಿಲ್ದಾಣ ಅಸ್ತಿತ್ವಕ್ಕೆ ಬಂದ ಬಳಿಕ ಸಿಗರೇಟು ಕಳ್ಳಸಾಗಣೆ ಮೊದಲ ಪ್ರಕರಣವಾಗಿದೆ.