ಬೆಳ್ಮಣ್, ನ 23 : ಸುಮಾರು 60 ವರುಷಗಳ ಹಿಂದಿನ ಇತಿಹಾಸವಿರುವ ಕರ್ನಾಟಕದ ಅತ್ಯಂತ ಪ್ರತಿಷ್ಠಿತ ವಿದ್ಯಾಸಂಸ್ಥೆಯಿದು. ದೇಶದಲ್ಲಿಯೇ ಅತ್ಯಂತ ಪ್ರತಿಷ್ಠಿತ ಕಾಲೇಜು ಎಂಬ ಹೆಗ್ಗಳಿಕೆಯನ್ನು ಪಡೆದಿರುವ ಮಲೆನಾಡು ಇಂಜಿನಿಯರಿಂಗ್ ಕಾಲೇಜು ಹಾಸನದಲ್ಲಿ ಮೊಟ್ಟ ಮೊದಲ ಹಳೆ ವಿದ್ಯಾರ್ಥಿಗಳ ವಿಶ್ವ ಮಟ್ಟದ ಸಮಾವೇಶ ನಡೆಸಿದ್ದು, ಎಂ.ಸಿ.ಇ ಕರಾವಳಿ ಮೀಟ್ -2017 ರ ಅಧ್ಯಕ್ಷರಾಗಿ ನಂದಳಿಕೆ ಚಾವಡಿ ಅರಮನೆ ಸುಹಾಸ್ ಹೆಗ್ಡೆ ಆಯ್ಕೆಯಾಗಿದ್ದಾರೆ.
ಗ್ಲೋಬಲ್ ಅಲ್ಯೂಮ್ನಿ ಗೆಟ್ ಟುಗೆದರ್ ಕಾರ್ಯಕ್ರಮದಲ್ಲಿ ಪದಾಧಿಕಾರಿಗಳ ಆಯ್ಕೆಯು ನಡೆದಿದ್ದು, ಪ್ರಧಾನ ಕಾರ್ಯದರ್ಶಿಯಾಗಿ ಬಿ. ಕಿರಣ್ . ಎಂ.ಆರ್.ಪಿ. ಎಲ್ ನ ಜನರಲ್ ಮ್ಯಾನೇಜರ್, ಸಂಚಾಲಕ ರಾಗಿ ವಿಜಯ್ ವಿಷ್ಣು ಮಯ್ಯ, ಅಸೋಶಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಸೌತ್ ಇಂಡಿಯಾ ಉಪಾಧ್ಯಕ್ಷರು , ಖಜಾಂಚಿ - ವಾಮನ ಶೆಣೈ.ಶೆಣೈ ಡೀಸೆಲ್ ಸರ್ವೀಸ್ ಮಂಗಳೂರು, ನಿರ್ದೇಶಕರಾಗಿ - ಜಗದೀಪ್ ಸುವರ್ಣ (ಡಿ.ಆರ್ ಸುವರ್ಣ ಗ್ರೂಫ್ ಮಂಗಳೂರು), ಮೊಹಮ್ಮದ್ ನಝೀರ್ (ಕಮಿಷನರ್ ಮಂಗಳೂರು ಸಿಟಿ ಕಾರ್ಪೋರೇಷನ್), ಗೋಕುಲದಾಸ್ ನಾಯಕ್ ( ಜಂಟಿ ಆಯುಕ್ತರು ಮಂಗಳೂರು ಸಿಟಿ ಕಾರ್ಪೋರೇಷನ್) ಸಾಜು ನೆಲಿಯಾರ್ (ಮ್ಯಾನೇಜಿಂಗ್ ಪಾರ್ಟ್ನರ್ ಟ್ರಿಡೆಂಟ್ ಮಂಗಳೂರು), ಎಂ. ಸುಶೀಲ್ಚಂದ್ರ (ಗ್ರೂಫ್ ಜನರಲ್ ಮ್ಯಾನೇಜರ್ ಎಂ.ಆರ್.ಪಿ.ಎಲ್) ವಿನಾಯಕ ಪ್ರಭು, ಸನತ್ ಕೆ.ಶೆಟ್ಟಿ, (ಆರ್ಕಿಟೆಕ್ಟ್ ಆಂಡ್ ಪ್ರೋಪ್ರ್ರೈಟರ್ ಎಸ್.ಕೆ.ಎಸ್ ನೆಟ್ ಗೇಟ್), ಉಮಾಶಂಕರ್ (ಜನರಲ್ ಮ್ಯಾನೇಜರ್ ಟೋಟಲ್ ಎಲ್.ಪಿ.ಜಿ ಲಿಮಿಟೆಡ್), ಸಂತೋಷ್ ಕೆ. ಶೆಟ್ಟಿ (ಡಿಸೈನರ್ ಅಸೋಷಿಯೇಟ್ಸ್), ಸುರೇಶ್ ಶೆಣೈ (ಟಿ.ಪಿ.ಐ ಫಾರ್ ಡಿಪಾರ್ಟ್ಮೆಂಟ್ ಆಫ್ ಎಕ್ಸ್ಪ್ಲೋಸಿವ್), ವಿಶ್ವಾಸ್ ಶೆಣೈ (ಪ್ರಧಾನ ಕಾರ್ಯದರ್ಶಿ ಕರ್ನಾಟಕ ಪೆಟ್ರೋಲ್ ವಿತರಕರ ಮಹಾ ಮಂಡಲ), ಪ್ರಶಾಂತ್ ಶೆಣೈ ಮೊದಲಾದವರು ಆಯ್ಕೆಯಾಗಿದ್ದಾರೆ.
2007 ರಲ್ಲಿ ಅತ್ಯುತ್ತಮ ಇಂಜಿನಿಯರಿಂಗ್ ಕಾಲೇಜು ಪ್ರಶಸ್ತಿ ಪಡೆದ ಕಾಲೇಜು ಇದಾಗಿದ್ದು, 2016 ರಲ್ಲಿ ಅಂತರಾಷ್ಟ್ರೀಯ ವ್ಯಾಪಾರ ಕೇಂದ್ರ ಕರ್ನಾಟಕದ ಅತ್ಯುತ್ತಮ ಇಂಜಿನಿಯರಿಂಗ್ ಕಾಲೇಜು ಎಂದು ಗುರುತಿಸಲ್ಪಟ್ಟಿದೆ. ಮಾತ್ರವಲ್ಲದೇ, ಈ ಕಾಲೇಜಿನಿಂದ ಪದವಿ ಪಡೆದ ಸಾವಿರಾರು ಮಂದಿ ವಿದ್ಯಾರ್ಥಿಗಳು ವಿಶ್ವದಾದ್ಯಂತ ಅತ್ಯುನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿ.
ಮಲೆನಾಡು ಇಂಜಿನಿಯರಿಂಗ್ ಕಾಲೇಜಿನ ಹಳೆ ವಿದ್ಯಾರ್ಥಿಗಳು ಒಟ್ಟು ಸೇರಿ ಇದೀಗ ದೂರದೂರುಗಳಲ್ಲಿ ನೆಲೆಸಿರುವ ಕಾಲೇಜಿನ ಹಳೆ ವಿದ್ಯಾರ್ಥಿಗಳನ್ನು ಒಟ್ಟು ಸೇರಿಸುವ ಸಮಾವೇಶವನ್ನು ಎಂ.ಸಿ.ಇ ಕರಾವಳಿ ಮೀಟ್ 2017 ಎನ್ನುವ ಶೀರ್ಷಿಕೆಯಡಿಯಲ್ಲಿ ಡಿ. 23 ಹಾಗೂ 24 ರಂದು ಮಂಗಳೂರಿನಲ್ಲಿ ನಡೆಸಲು ಉದ್ದೇಶಿಸಿದೆ. ಸುಮಾರು 500 ಕ್ಕೂ ಅಧಿಕ ಹಳೆ ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆಯಿದ್ದು ನೋಂದಾವಣಿ ಈಗಾಗಲೇ ಆರಂಭಗೊಂಡಿದೆ..