ಮಂಗಳೂರು, ನ 23: ವಿಶ್ವ ಹಿಂದೂ ಪರಿಷತ್ ಅಂತರಾಷ್ಟ್ರೀಯ ಕಾರ್ಯಧ್ಯಕ್ಷರಾದ ಮತ್ತು ಹಿ೦ದೂ ಹೃದಯ ಸಾಮ್ರಾಟ್ ಎಂದೇ ಖ್ಯಾತಿ ಪಡೆದಿರುವ ಪ್ರವೀಣ್ ಭಾಯ್ ತೊಗಾಡಿಯಾ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದು, ಉಡುಪಿಯತ್ತ ತೆರಳಿದ್ದಾರೆ.
ಉಡುಪಿಯಲ್ಲಿ ನಡೆಯಲಿರುವ ಐತಿಹಾಸಿಕ ಧರ್ಮ ಸಂಸದ್ ನಲ್ಲಿ ಭಾಗಿಯಾಗಲೆಂದು ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರವೀಣ್ ಭಾಯ್ ತೊಗಾಡಿಯಾ ಸುದ್ದಿಗಾರರೊಂದಿಗೆ ಮಾತನಾಡಿ, ಉಡುಪಿ ಧರ್ಮ ಸಂಸದ್ ನಲ್ಲಿ ಅಸ್ಪೃಷ್ಯತೆ, ಗೋ ರಕ್ಷಣೆ ಕುರಿತಂತೆ ಅನೇಕ ವಿಚಾರಗಳು ಚರ್ಚೆಯಾಗಲಿದೆ ಎಂದು ತಿಳಿಸಿದ್ದಾರೆ.
ರಾಮ ಮಂದಿರ ನಿರ್ಮಾಣದ ಕುರಿತು ಧರ್ಮ ಸಂಸದ್ ನಲ್ಲಿ ಚರ್ಚೆ ನಡೆಯಲಿದ್ದು, ರೈತರಿಗೆ ಪೂರಕ ಯೋಜನೆ ಕಲ್ಪಿಸುವ ಕುರಿತು ಚರ್ಚೆಯಾಗಲಿದೆ ಎಂದು ಹೇಳಿದ್ದಾರೆ.
ಪದ್ಮಾವತಿ ಚಿತ್ರ ವಿವಾದದಲ್ಲಿದ್ದು, ಈ ಚಿತ್ರವನ್ನು ಸಂಪೂರ್ಣ ಬ್ಯಾನ್ ಮಾಡಬೇಕು ಎಂದು ಹೇಳಿದರು.