ಮಂಗಳೂರು, ಜು.03(DaijiworldNews/AK): ಹಯಾತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಮದರಸ ಎದುರು ಪದವು ಮೂಡುಶೆಡ್ಡೆ ಇದರ ವಾರ್ಷಿಕ ಮಹಾ ಸಭೆಯು ಇತ್ತೀಚೆಗೆ ಹಯಾತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಮದರಸ ಸಭಾಂಗಣದಲ್ಲಿ ನೆರವೇರಿತು.

ಸಭೆಯನ್ನು ಹಯಾತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಮದರಸದ ಖತೀಬರಾದ ಸಫ್ವಾನ್ ಇರ್ಫಾನಿ ಮುಂಡೋಳೆದು ಉದ್ಘಾಟಿಸಿ ಚಾಲನೆ ನೀಡಿದರು.
ಸಭೆಯಲ್ಲಿ 2023-24 ನೇ ಸಾಲಿನ ವಾರ್ಷಿಕ ವರದಿ, ಮತ್ತು ಲೆಕ್ಕಪತ್ರ ಮಂಡಿಸಲಾಯಿತು. ಬಳಿಕ 2024-25 ನೇ ಸಾಲಿನ ಮಸೀದಿಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಮಸೀದಿ ನೂತನ ಅಧ್ಯಕ್ಷರಾಗಿ ಮೈಯ್ಯದ್ದಿ ಅವರು ಮೂರನೇ ಬಾರಿ ಆಯ್ಕೆ ಆದರೂ, ಪ್ರಧಾನ ಕಾರ್ಯದರ್ಶಿಯಾಗಿ ಜಮಾಲುದ್ದೀನ್, ಜೊತೆ ಕಾರ್ಯದರ್ಶಿ ಮಹಮ್ಮದ್ ಅಫ್ರೀದ್, ಉಪಾಧ್ಯಕ್ಷ ಮನ್ಸೂರ್, ಕೋಶಾಧಿಕಾರಿ ಮುಸ್ತಫಾ ಎ.ಕೆ.ಎಂ ಅವರನ್ನು ಆಯ್ಕೆ ಮಾಡಲಾಯಿತು.
ಈ ವೇಳೆ ನೂತನ ಆಡಳಿತ ಮಂಡಳಿ ಸದಸ್ಯರಾಗಿ ಎ.ಪಿ ಇಕ್ಬಾಲ್, ನವಾಜ್, ಅಬ್ದುಲ್ ಖಾದರ್, ಆರೀಫ್, ಅಶ್ರಫ್ ಕೆತ್ತಿಕಲ್, ಕಲಂದರ್, ಅಹಮ್ಮದ್ ಬಾವ, ಅಥಾವುಲ್ಲ, ಆಯ್ಕೆಯಾದರು.