ಮಂಗಳೂರು,ಜು 04 (DaijiworldNews/ AK): ಜಿಲ್ಲೆಯಲ್ಲಿ ಮುಂಗಾರು ಚುರುಕುಗೊಂಡಿದ್ದು, ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಬೋಂಡಾ ಫ್ಯಾಕ್ಟರಿ ಮಾರ್ಗದ ಅಡ್ಯಾರ್ ಧೋತ ಎಂಬಲ್ಲಿನ ಮನೆ ಸಂಪೂರ್ಣ ಜಲಾವೃತಗೊಂಡಿದೆ.











ವಿಕ್ರಮ್ ಶೆಟ್ಟಿ ಎಂಬುವರಿಗೆ ಸೇರಿದ ಒಂದು ಅಂತಸ್ತಿನ ಮನೆ ಯಾಗಿದ್ದು, ಕಳೆದ ಮೂರು ವರ್ಷಗಳಿಂದ ಇದೇ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಬೋಂಡಾ ಫ್ಯಾಕ್ಟರಿಗೆ ಹೋಗುವ ರಸ್ತೆಯೂ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮುಳುಗಡೆಯಾಗುತ್ತಿದ್ದು, ರಸ್ತೆಯುದ್ದಕ್ಕೂ ಜಲಾವೃತವಾಗಿದೆ.
ಆ ಪ್ರದೇಶದಲ್ಲಿ ಹಲವಾರು ಮನೆಗಳು ಮತ್ತು ಶಾಲೆಗಳಿದ್ದರೂ ಅವುಗಳಿಗೆ ಹೋಗುವ ರಸ್ತೆಯು ಅಸಮರ್ಪಕ ಒಳಚರಂಡಿ ವ್ಯವಸ್ಥೆ ಸರಿಯಾಗಿ ಇಲ್ಲದಿರುವುದರಿಂದ ಸಂಪೂರ್ಣವಾಗಿ ಜಲಾವೃತವಾಗಿದೆ.
2021ರಲ್ಲಿ ಮಳೆಗಾಲದಲ್ಲಿ ವಿಕ್ರಮ್ ಬಾಡಿಗೆ ಮನೆಯಲ್ಲಿ ಇರುವಂತೆ ಮನವಿ ಮಾಡಲಾಯಿತು. ಸಂಬಂಧಪಟ್ಟ ಅಧಿಕಾರಿಗಳು ಒಳಚರಂಡಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದಾಗ ಸ್ವಲ್ಪ ಭರವಸೆ ಇತ್ತು, ಆದರೆ ದುರದೃಷ್ಟವಶಾತ್ ಇಂದಿಗೂ ಕಾಮಗಾರಿ ಪ್ರಾರಂಭವಾಗದ ಪರಿಣಾಮ ಸತತ ಮೂರನೇ ವರ್ಷವೂ ಮನೆ ಮುಳುಗಡೆಯಾಗುತ್ತಿದ್ದು ಜೀವನ ದುಸ್ಥರವಾಗಿದೆ.
ಪ್ರತಿ ವರ್ಷವೂ ಶಾಸಕರು ಮತ್ತು ಜಿಲ್ಲಾಡಳಿತಕ್ಕೆ ಶೀಘ್ರ ಪರಿಹಾರ ನೀಡುವಂತೆ ಮನೆ ಮಾಲೀಕರು ಹಾಗೂ ಇತರೆ ನಿವಾಸಿಗಳು ಒತ್ತಾಯಿಸುತ್ತಿದ್ದರೂ ಮೂರು ವರ್ಷಗಳಿಂದ ಇದೇ ಸಮಸ್ಯೆ ಎದುರಾಗುತ್ತಿದೆ ಎಂದು ಅಲ್ಲಿನ ನಿವಾಸಿಗಳ ಆಳಲು.
ವಿಕ್ರಮ್ ತನ್ನ ಕುಟುಂಬ ಮತ್ತು ಚಿಕ್ಕ ಮಗುವಿನೊಂದಿಗೆ ಪ್ರತಿ ಮಳೆಗಾಲದಲ್ಲಿ ಇದೇ ಸಮಸ್ಯೆ ಎದುರಿಸುತ್ತಿದ್ದಾರೆ. ಮತ್ತು ಅವರು ಹೆಂಡತಿಯ ನಿವಾಸಕ್ಕೆ ಹೋಗಬೇಕಾದ ಸ್ಥಿತಿ .ವಿಕ್ರಮ್ ನಿವಾಸದ ಜತೆಗೆ ವಿಜಯ್ ಡಿಸೋಜಾ ಅವರ ಮನೆಯೂ ಜಲಾವೃತವಾಗಿದ್ದು, ಎರಡು ವರ್ಷಗಳ ಹಿಂದೆ ಆಯೇಷಾ ಅವರ ಮನೆ ಕುಸಿದು ಬಿದ್ದಿತ್ತು.