ಮಂಗಳೂರು, ಜು.05(DaijiworldNews/AA): ಡೆಂಗ್ಯೂ ಟೆಸ್ಟಿಂಗ್ ಬೆಲೆ ಹೆಚ್ಚಳ ಕಂಡು ಬಂದ್ರೆ ಖಾಸಗಿ ಆಸ್ಪತ್ರೆಗಳ ವಿರುದ್ದ ಕ್ರಮ ತೆಗೆದುಕೊಳ್ಳಲಾಗುತ್ತದೆ. ಹೆಚ್ಚು ತೆಗೊಂಡ್ರೆ ಅವರ ಲೈಸೆನ್ಸ್ ಕೂಡ ನಾವು ಕ್ಯಾನ್ಸಲ್ ಮಾಡಬಹುದು ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಎಚ್ಚರಿಕೆ ನೀಡಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡೆಂಗ್ಯೂ ವೈರಲ್ ಜ್ವರ, ಸಾವು ಸಂಭವಿಸದಂತೆ ತಡೆಯಬೇಕು. ಡೆಂಗ್ಯೂ ಪ್ರಕರಣದಲ್ಲಿ ಸೂಕ್ತ ಚಿಕಿತ್ಸೆ ಕೊಡೋ ವ್ಯವಸ್ಥೆ ಆಗಿದೆ. ಲಾರ್ವಾ ಉತ್ಪತ್ತಿ ಸ್ಥಳಗಳಲ್ಲಿ ನಿಯಂತ್ರಣ ಮಾಡೋದು ಮೊದಲ ಕೆಲಸವಾಗಿದೆ. ಸಂಗ್ರಹವಾದ ನೀರಲ್ಲಿ ಸೊಳ್ಳೆ ಉತ್ಪತ್ತಿ ಆಗ್ತಿದೆ, ಅದು ನಿಯಂತ್ರಿಸಬೇಕು. ಸಾರ್ವಜನಿಕರು ಡೆಂಗ್ಯೂ ಖಾಯಿಲೆಯನ್ನು ಗಂಭೀರವಾಗಿ ತೆಗೆದುಕೊಳ್ತಿಲ್ಲ, ಮನೆಗಳ ಮುಂದೆ ನೀರು ನಿಲ್ಲುತ್ತಿದೆ ಎಂದು ತಿಳಿಸಿದ್ದಾರೆ.
ಮನೆ ಕಟ್ಟಲು ನಾವೇ ಗುಡ್ಡ ಅಗೀತಾ ಇದೀವಿ. ಕಟ್ಟಿಂಗ್ ಮಾಡ್ತಾ ಇದೀವಿ. ಅದು ವೈಜ್ಞಾನಿಕವಾಗಿ ಇರದೇ ಮಳೆ ಬಂದಾಗ ಕುಸೀತಾ ಇದೆ. ಇದು ನಾವೇ ಸೃಷ್ಟಿ ಮಾಡಿಕೊಂಡಿರೋ ಸಮಸ್ಯೆಯಾಗಿದೆ. ತಡೆಗೋಡೆ ಕಟ್ಟೋಕೆ ದೊಡ್ಡ ಅನುದಾನಬೇಕು. ಅದರ ಬಗ್ಗೆ ನೋಡೋಣ ಎಂದು ಹೇಳಿದರು.