ಪುತ್ತೂರು, ಮೇ15(Daijiworld News/SS): ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಡಿಕೆಯನ್ನು ಕಳ್ಳತನ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಲಾಗಿದೆ.
ಮಾಧವ ಮೂಲ್ಯ (27) ಬಂಧಿತ ಆರೋಪಿ.
ಎಸ್.ಅಶೋಕ ಬೋಗಲೆ ಪಡುವನ್ನೂರು ಎಂಬವರು ತಮ್ಮ ಮನೆಯಿಂದ ಸುಮಾರು 15,000 ರೂ ಮೌಲ್ಯದ ಅಡಿಕೆಯನ್ನು ಕಳವು ಮಾಡಿರುವ ಬಗ್ಗೆ ದೂರು ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ.ಸಯ್ಯದ್ ತಮೀಮ್ ಮತ್ತು ರವಿ.ಎನ್ ಎಂಬ ಇಬ್ಬರು ಆರೋಪಿಗಳನ್ನು ಈ ಹಿಂದೆಯೇ ದಸ್ತಗಿರಿ ಮಾಡಿದ್ದು, ಪೊಲೀಸರು ಅವರಿಂದ 3,000 ಸುಲಿಯದ ಅಡಿಕೆ ಮತ್ತು ಕೃತ್ಯಕ್ಕೆ ಬಳಸಿದ ಆಟೋ ರಿಕ್ಷಾವನ್ನು ವಶಪಡಿಸಿಕೊಂಡಿದ್ದರು.
ಇದೀಗ ಸಣಂಗೋಲು ಪಡುವನ್ನೂರು ಗ್ರಾಮ ನಿವಾಸಿ ಮಾಧವ ಮೂಲ್ಯ ಎಂಬಾತನನ್ನು ಪೊಲೀಸರು ಪತ್ತೆ ಮಾಡಿದ್ದು, ಈತನಿಂದ ಕಳವು ಮಾಡಿದ ಸುಮಾರು 50 ಕೆ.ಜಿ ಸುಲಿದ ಅಡಿಕೆಯನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಿದೆ.