ಕಾರ್ಕಳ, ಜು. 09(DaijiworldNews/AA): ಕ್ರೇನ್ ಢಿಕ್ಕಿ ಹೊಡೆದ ಪರಿಣಾಮವಾಗಿ ಪಾದಾಚಾರಿಯೋರ್ವರು ಘಟನಾ ಸ್ಥಳದಲ್ಲಿ ದಾರುಣ ರೀತಿಯಲ್ಲಿ ಮೃತಪಟ್ಟ ಘಟನೆ ಕುಕ್ಕುಂದೂರು ಗ್ರಾಮದ ದುರ್ಗಾ ಗ್ಯಾರೇಜ್ ಬಳಿ ಮಂಗಳವಾರ ಬೆಳಗ್ಗೆ ಸಂಭವಿಸಿದೆ.

ಕುಕ್ಕುದೂರು ಜಲದುರ್ಗನಗರದ ನಿವಾಸಿ ಅಂಗಾರ(70) ಮೃತಪಟ್ಟ ದುರ್ದೈವಿ.
ಇಂದು ಬೆಳಗ್ಗೆ ಜೋಡುಕಟ್ಟೆ ಕಡೆಯಿಂದ ಅಯ್ಯಪ್ಪನಗರ ಕಡೆಗೆ ಅಂಗಾರ ಅವರು ರಸ್ತೆಯ ಒಂದು ಪಾಶ್ವ೯ದಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಕ್ರೇನ್ ಡಿಕ್ಕಿ ಹೊಡೆದಿತ್ತು.
ಕ್ರೇನ್ ಚಾಲಕನು ನಿರ್ಲಕ್ಷ್ಯ ರೀತಿಯಲ್ಲಿ ವಾಹನ ಚಲಾಯಿಸಿರುವುದು ಘಟನೆಗೆ ಕಾರಣವಾಗಿದೆ. ಪರಿಣಾಮವಾಗಿ ಪಾದಚಾರಿ ಅಂಗಾರ ಕ್ರೇನ್ ಅಡಿಗೆ ಸಿಲುಕಿ ದಾರುಣ ರೀತಿಯಲ್ಲಿ ಸಾವನ್ನಪ್ಪಿದ್ದಾರೆ.
ಕುಕ್ಕುಂದೂರು ಅಯ್ಯಪ್ಪನಗರದ ಕಲ್ಲುಕೋರೆಯ ಮಾಲಕ ಸದಾನಂದ ಎಂಬವರಿಗೆ ಸೇರಿದ್ದು ಎಂಬ ಮಾಹಿತಿ ತಿಳಿದು ಬಂದಿದೆ. ನಿರ್ಲಕ್ಷ್ಯ ರೀತಿಯಲ್ಲಿ ಕ್ರೇನ್ ಚಲಾಯಿಸಿ ವ್ಯಕ್ತಿಯ ಸಾವಿಗೆ ಕಾರಣನಾದ ಚಾಲಕನ ವಿರುದ್ಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.