ಉಡುಪಿ, ನ 24: ಕೃಷ್ಣನಗರಿಯಲ್ಲಿ ನಡೆಯಲಿರುವ ಮೂರು ದಿನಗಳ ಐತಿಹಾಸಿಕ ಧರ್ಮ ಸಂಸದ್ ನಲ್ಲಿ ಭಾಗಿಯಾಗಲೆಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಉಡುಪಿಗೆ ಆಗಮಿಸಿದ್ದಾರೆ.
ಮೋಹನ್ ಮಧುಕರ್ ಭಾಗವತ್ ಅವರು ಮೋಹನ್ ಭಾಗವತ್ ಎಂಬ ಹೆಸರಿನಿಂದ ಆರ್.ಎಸ್.ಎಸ್ ನಲ್ಲಿ ಗುರುತಿಸಿಕೊಂಡಿರುವ ಇವರು, ಇದೀಗ ಉಡುಪಿಗೆ ಆಗಮಿಸಿ ಪೇಜಾವರ ಹಿರಿಯ ಯತಿ ವಿಶ್ವೇಶ್ವ ತೀರ್ಥ ಸ್ವಾಮೀಜಿಯವರನ್ನು ಭೇಟಿಯಾಗಿದ್ದಾರೆ.
ಐತಿಹಾಸಿಕ ಧರ್ಮ ಸಂಸದ್ ನಲ್ಲಿ ಅಸ್ಪೃಷ್ಯತೆ, ಗೋ ರಕ್ಷಣೆ, ರಾಮ ಮಂದಿರ ನಿರ್ಮಾಣದ ಕುರಿತಂತೆ ಅನೇಕ ವಿಚಾರಗಳು ಚರ್ಚೆಯಾಗಲಿದೆ ಎಂದು ತಿಳಿಸಿದ್ದಾರೆ.