ಕಾಸರಗೋಡು, ಮೇ 16 (Daijiworld News/MSP): ನಗರದ ಜವಳಿ ಅಂಗಡಿ ನೌಕರನಾಗಿದ್ದ ಮೀಪುಗುರಿಯ ಸಾಬಿತ್ (19) ಎಂಬ ಯುವಕನ ಕೊಲೆ ಗೆ ಸಂಬಂಧಪಟ್ಟಂತೆ ಎಲ್ಲಾ ಆರೋಪಿಗಳನ್ನು ಕಾಸರಗೋಡು ಸೆಷನ್ಸ್ ನ್ಯಾಯಾಲಯ ಖುಲಾಸೆ ಗೊಳಿಸಿದೆ.
ಹತ್ಯೆಯಾದ ಸಾಬಿತ್
ಆರು ಬಾರಿ ಪ್ರಕರಣದ ತೀರ್ಪು ನೀಡಲು ಮುಂದೂಡಿದ್ದು , ಗುರುವಾರ ಮತ್ತೆ ವಿಚಾರಣೆಗೆ ಕೈಗೆತ್ತಿಕೊಂಡು ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿದೆ. ಸೂಕ್ತ ಸಾಕ್ಷ್ಯಗಳ ಕೊರತೆ ಇರುವುದರಿಂದ ತೀರ್ಫು ನೀಡಲಾಗಿದೆ.
ನಗರದ ಜೆ.ಪಿ ಕಾಲನಿಯ ಕೆ. ಅಕ್ಷಯ್ ಯಾನೆ ಮುನ್ನ (21) , ಸೂರ್ಲು ಕಾಳ್ಯಾ೦ಗಾಡ್ ನ ಕೆ.ಎನ್ ವೈಶಾಕ್ (22), ಜೆ.ಪಿ ಕಾಲನಿಯ ಸಚಿನ್ ಕುಮಾರ್ (22), ಕೇಳು ಗುಡ್ಡೆ ಯ ಬಿ . ಕೆ ಪವನ್ ಕುಮಾರ್ (30), ಕೊನ್ನಕ್ಕಾಡ್ ನ ಧನಂಜಯ (28), ಆರ್. ವಿಜೇಶ್ (23) ನನ್ನು ನ್ಯಾಯಾಲಯ ಖುಲಾಸೆ ಗೊಳಿಸಿದೆ.
ಕೃತ್ಯದಲ್ಲಿ ಶಾಮೀಲಾಗಿದ್ದ ಜೆ. ಪಿ ಕಾಲನಿಯ 17 ವರ್ಷದ ಬಾಲಕನ ವಿರುದ್ದದ ವಿಚಾರಣೆ ಮುಂದಿನ ದಿನಗಳಲ್ಲಿ ನಡೆಯಲಿದೆ. 2013ರ ಜುಲೈ ಏಳರಂದು ಬೆಳಿಗ್ಗೆ ನುಳ್ಳಿಪ್ಪಾಡಿ ಜೆ .ಪಿ ಕಾಲನಿ ಪರಿಸರದಲ್ಲಿ ಸ್ನೇಹಿತ ಮೀಪುಗುರಿಯಾ ರಹೀಸ್ ಜೊತೆ ಬೈಕ್ ನಲ್ಲಿ ತೆರಳುತ್ತಿದ್ದಾಗ ತಡೆದ ಏಳು ಮಂದಿಯ ತಂಡ ಇರಿದು ಕೊಲೆಗೈದಿತ್ತು.