ಪಡುಬಿದ್ರೆ, ಜು. 14(DaijiworldNews/AA): ಫ್ರಿಡ್ಜ್ ನೊಳಗೆ ಇಟ್ಟಿದ್ದ ಹೂಕೋಸಿನೊಳಗೆ ಹಾವಿನ ಮರಿ ಕಂಡು ಮಹಿಳೆಯೋರ್ವರು ಹೌಹಾರಿದ ಘಟನೆ ಕಾಪುವಿನ ಪಡುಬಿದ್ರೆಯಲ್ಲಿ ನಡೆದಿದೆ.

ಬೇಂಗ್ರೆಯ ಮಹಿಳೆಯೋರ್ವರು ಫ್ರಿಡ್ಜ್ ನಲ್ಲಿ ತರಕಾರಿ ಇಟ್ಟಿದ್ದರು. ಅಡುಗೆ ಮಾಡಲು ಫ್ರಿಡ್ಜ್ ನಲ್ಲಿಟ್ಟಿದ್ದ ತರಕಾರಿ ತೆಗೆದು ಕತ್ತರಿಸಲು ಮುಂದಾಗಿದ್ದಾರೆ. ಈ ವೇಳೆ ಹೂಕೋಸಿನ ಒಳಭಾಗದಿಂದ ಹಾವಿನ ಮರಿ ಹೊರಗೆ ಬರುವುದನ್ನು ಕಂಡು ದಂಗಾಗಿದ್ದಾರೆ.
ಬಳಿಕ ಮಹಿಳೆ ತನ್ನ ಕೈಯಲ್ಲಿದ್ದ ತರಕಾರಿಯನ್ನು ಚೆಲ್ಲಾಪಿಲ್ಲಿಯಾಗಿ ಬಿಟ್ಟು ಹೊರಕ್ಕೆ ಓಡಿ ಹೋಗಿದ್ದಾರೆ. ಬಳಿಕ ಉರಗ ತಜ್ಞರು ಹಾವನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ. ಹೂಕೋಸಿನೊಳಗೆ ಇದ್ದದ್ದು ಮರಿ ಹೆಬ್ಬಾವು ಎಂದು ತಿಳಿಸಿದ್ದಾರೆ.
ಮಳೆಗಾಲದಿಂದಾಗಿ ಹಾವುಗಳು ಬೆಚ್ಚನೆಯ ಸ್ಥಳ ಅರಸಿ ಬರುತ್ತದೆ. ಹೀಗಾಗಿ ಹಾವಿನ ಮರಿಯು ಹೂಕೋಸಿನೊಳಗೆ ಅವಿತುಕೊಂಡಿರಬಹುದು. ಹಾಗಾಗಿ ಮಳೆಗಾಲದಲ್ಲಿ ತರಕಾರಿ ಖರೀದಿಸುವಾಗ ಮತ್ತು ಬಳಸುವಾಗ ಬಹಳ ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ.