ಬಂಟ್ವಾಳ, ಜು 16(DaijiworldNews/ AK): ಪಾಣೆಮಂಗಳೂರು ಪೇಟೆ ಸಂಪರ್ಕ ರಸ್ತೆಯಿಂದ ಮಾರುತಿ ಸ್ವಿಫ್ಟ್ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪ್ರಪಾತದಲ್ಲಿ ತುಂಬಿದ್ದ ನೀರಿಗೆ ಬಿದ್ದ ಘಟನೆ ಭಾನುವಾರ ರಾತ್ರಿ ನಡೆದಿದೆ.

ರಾತ್ರಿ ಸುಮಾರು 11.30ಕ್ಕೆ ಈ ಘಟನೆ ನಡೆದಿದ್ದು, ಭಾರಿ ಮಳೆ ಇದ್ದ ಸಂದರ್ಭ ಅನಂತಕೃಷ್ಣ ಎಂಬವರು ಚಲಾಯಿಸುತ್ತಿದ್ದ ಕಾರು ಹೊಂಡ ತಪ್ಪಿಸುವ ವೇಳೆ ಪ್ರಪಾತಕ್ಕೆ
ಉರುಳಿದೆ.
ಆದರೆ ಚಾಲಕನಿಗೆ ಗಾಯವಾಗಿಲ್ಲ. ಕಾರು ಜಖಂಗೊಂಡಿದ್ದು, ಸೋಮವಾರ ಮಧ್ಯಾಹ್ನದ ವೇಳೆಗೆ ಕ್ರೇನ್ ಬಳಸಿ ಅದನ್ನು ಮೇಲಕ್ಕೆತ್ತಲಾಯಿತು