ಸುಳ್ಯ, ಜು. 16(DaijiworldNews/AA): ಅಜ್ಜಾವರ ಗ್ರಾಮದ ಮೇನಾಲ, ಮೇದಿನಡ್ಕ ವ್ಯಾಪ್ತಿಯಲ್ಲಿ ಕಾಡಾನೆ ದಾಳಿಗೆ ಅಪಾರ ಕೃಷಿ ನಾಶವಾಗಿರುವ ಕುರಿತು ವರದಿಯಾಗಿದೆ.


ರಾಜೇಶ್ ಶೆಟ್ಟಿ ಮೇನಾಲ, ರಾಮಕೃಷ್ಣ ರೈ ಮೇನಾಲ, ವಿನೋದ್ ಶೆಟ್ಟಿ ಮೇನಾಲ, ಅದ್ರಮ, ಪ್ರಸಾದ್ ರೈ ಮೇನಾಲ, ಸುಧೀರ್ ರೈ ಮೇನಾಲ ಅವರ ತೋಟಗಳಿಗೆ ಭಾನುವಾರ ತಡ ರಾತ್ರಿ ಆನೆಗಳ ಹಿಂಡು ದಾಳಿಯಿಟ್ಟಿದ್ದು, ಬಾಳೆ, ಅಡಿಕೆ ತೆಂಗುಗಳನ್ನು ಧರಶಾಹಿ ಮಾಡಿವೆ.
ಒಂದೆಡೆ ಗಾಳಿಗೆ ಅಡಿಕೆ ಮರಗಳು ನೆಲಕ್ಕುರುಳಿದರೆ ಇತ್ತ ಆನೆಗಳ ದಾಳಿಯಿಂದ ರೈತರು ಮತ್ತಷ್ಟು ಕೆಂಗೆಟ್ಟಿದ್ದಾರೆ. ಆನೆಗಳ ನಿಯಂತ್ರಣಕ್ಕೆ ಸೂಕ್ತ ರೀತಿಯಲ್ಲಿ ಕ್ರಮಗಳ ಜೊತೆಗೆ ಸೋಲಾರ್ ಬೇಲಿ ನಿರ್ಮಾಣ ಕಾರ್ಯ ಆಗಬೇಕು ಎಂದು ರೈತರು ಆಗ್ರಹಿಸಿದ್ದಾರೆ.