ಮಂಗಳೂರು, ಮೇ16(Daijiworld News/SS): ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಮಂಗಳೂರು ವಲಯದ ಮಹಾತ್ವಕಾಂಕ್ಷೆಯ ಯೋಜನೆಯಾದ ಛಾಯಾಸುರಕ್ಷಾ ಯೋಜನೆಯಡಿಯಲ್ಲಿ ಮಾದರಿ ಕೆಲಸ ಕಾರ್ಯಗಳು ನಡೆಯುತ್ತಿದೆ.
ಈ ಛಾಯಾಸುರಕ್ಷಾ ಯೋಜನೆಯ ಪ್ರಥಮ ಫಲಾನುಭವಿ ದಿ. ಗಣೇಶ್ ತಂದೆ ತಾಯಿಯವರಿಗೆ ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಮಂಗಳೂರು ವಲಯದ ಛಾಯಾಸುರಕ್ಷಾ ಯೋಜನೆಯ 1 ಲಕ್ಷ ಹಾಗೂ ಕರ್ಣಾಟಕ ಬ್ಯಾಂಕ್'ನ ಕೆ.ಬಿ.ಎಲ್ ಸುರಕ್ಷಾ ಯೋಜನೆಯ 5 ಲಕ್ಷ ಮೊತ್ತದ ಚೆಕ್'ನ್ನು ಜಂಟಿಯಾಗಿ ವಿತರಿಸಲಾಗಿದೆ.
ಛಾಯಾಗ್ರಾಹಕರಿಂದ ಛಾಯಾಗ್ರಾಹಕರಿಗೋಸ್ಕರ ಮಾಡಿದ ಈ ಯೋಜನೆಯ 1 ಲಕ್ಷ ಹಾಗೂ ಕರ್ಣಾಟಕ ಬ್ಯಾಂಕ್'ನ 5 ಲಕ್ಷ ಮೊತ್ತದ ಚೆಕ್ ಸ್ವೀಕರಿಸಿದ ಗಣೇಶ್ ಕುಟುಂಬದವರು ನಮ್ಮ ಸಂಘಟನೆಯ ಬಗ್ಗೆ ಅತೀವ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಮಂಗಳೂರು ವಲಯದ ಅಧ್ಯಕ್ಷರಾದ ಪದ್ಮನಾಭ ಸುವರ್ಣ, ಮಾಜಿ ಜಿಲ್ಲಾಧ್ಯಕ್ಷರುಗಳಾದ ಕರುಣಾಕರ್ ಕಾನಂಗಿ, ಜಗನ್ನಾಥ ಶೆಟ್ಟಿ, ಮಂಗಳೂರು ವಲಯದ ಗೌರವಾಧ್ಯಕ್ಷರಾದ ಲೋಕೇಶ್, ಜಿಲ್ಲಾ ಜತೆ ಕಾರ್ಯದರ್ಶಿ ಹರೀಶ್ ಅಡ್ಯಾರ್, ಕರ್ಣಾಟಕ ಬ್ಯಾಂಕ್ ಬಲ್ಮಠ ಶಾಖೆಯ ಬ್ರಾಂಚ್ ಮ್ಯಾನೇಜರ್ ಹಾಗೂ ಬ್ಯಾಂಕ್ ಸಿಬ್ಬಂದಿಗಳು ಉಪಸ್ಥಿತರಿದ್ದರು.