ಕಾಸರಗೋಡು, ಜು. 17(DaijiworldNews/AK):ಒಂದು ದಿನದ ಹಿಂದೆ ನಾಪತ್ತೆಯಾಗಿದ್ದ ಯುವಕನ ಮೃತದೇಹ ನೆರೆಮನೆಯ ಬಾವಿಯಲ್ಲಿ ಪತ್ತೆಯಾಗಿದೆ.ಪೆರ್ಲ ಅಡ್ಕ ಅಬ್ರಾಜೆಯ ಯತೀಶ (36) ನ ಮೃತದೇಹ ಜನವಾಸವಿಲ್ಲದ ನೆರೆ ಮನೆಯ ಬಾವಿಯಲ್ಲಿ ಮಂಗಳವಾರ ಸಂಜೆ ಪತ್ತೆಯಾಗಿದೆ.

ಯತೀಶರ ತಂದೆ ಈಶ್ವರ ನಾಯ್ಕ್ ಸೋಮವಾರ ಮುಂಜಾನೆ ನಿಧನರಾಗಿದ್ದು, ಬಳಿಕ ಯತೀಶ ನಾಪತ್ತೆಯಾಗಿದ್ದರು. ಈಶ್ವರ ನಾಯ್ಕ್ ರ ಪತ್ನಿ ಪಾರ್ವತಿ ಈ ಹಿಂದೆ ನಿಧನರಾಗಿದ್ದು, ಅಸೌಖ್ಯದಿಂದ ಹಾಸಿಗೆ ಹಿಡಿದಿದ್ದ ಈಶ್ವರ ನಾಯ್ಕ್ ರನ್ನು ಮಗ ಯತೀಶ ಅರೈಕೆ ಮಾಡುತ್ತಿದ್ದರು.
ಸೋಮವಾರ ಮುಂಜಾನೆ ಸುಮಾರು 3.30ಕ್ಕೆ ಈಶ್ವರ ನಾಯ್ಕ್ ನಿಧನರಾಗಿದ್ದು, ಬೆಳಗ್ಗೆ 8 ಗಂಟೆಯಿಂದ ಯತೀಶ ನಾಪತ್ತೆಯಾಗಿದ್ದರು.ಮೃತದೇಹದ ಅಂತ್ಯಕ್ರಿಯೆ ನಡೆಸುವಾಗಲೂ ಯತೀಶ ಸ್ಥಳದಲ್ಲಿರಲಿಲ್ಲ. ಯತೀಶರ ಮೊಬೈಲ್ ಫೋನ್, ಚಪ್ಪಲಿ ಮನೆಯಲ್ಲಿ ಪತ್ತೆಯಾಗಿತ್ತು.ಬಳಿಕ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ನೀಡಲಾಗಿತ್ತು. ಮಂಗಳವಾರ ಸಂಜೆ ಹುಡುಕಾಡಿದಾಗ ಯತೀಶರ ಮೃತದೇಹ ಮನೆ ಸಮೀಪದ ಜನವಾಸವಿಲ್ಲದ ಮನೆ ಸಮೀಪದ ಬಾವಿಯಲ್ಲಿ ಪತ್ತೆಯಾಗಿದೆ.
ಅಗ್ನಿಶಾಮಕ ದಳ ಸಿಬ್ಬಂದಿಗಳು ಆಗಮಿಸಿ ಮೃತದೇಹವನ್ನು ಮೇಲೆತ್ತಿದರು. ಬದಿಯಡ್ಕ ಠಾಣಾ ಪೊಲೀಸರು ಮಹಜರು ನಡೆಸಿದರು.ತಂದೆಯ ನಿಧನದ ಶೋಕದಿಂದ ಯತೀಶ್ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಶಂಕೆ ವ್ಯಕ್ತವಾಗಿದೆ.