ಪುತ್ತೂರು, ಮೇ17(Daijiworld News/SS): ಇಲ್ಲಿನ ನರಿಮೊಗರು ಗ್ರಾಮದ ಹಿಮಾಯುತುಲ್ ಮದರಸದಲ್ಲಿ ಹನ್ನೆರಡರ ಹರೆಯದ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಮೌಲ್ವಿ ಅನ್ವಾರ್ ವಿರುದ್ಧ ದೂರು ದಾಖಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮೌಲ್ವಿಯ ಲೈಂಗಿಕ ಕಿರುಕುಳದಿಂದ ರೋಸಿ ಹೋದ ಬಾಲಕ ತನ್ನ ಪೋಷಕರಲ್ಲಿ ಹೇಳಿಕೊಂಡ ನಂತರ ಆತನ ನಿಜಬಣ್ಣ ಬಯಲಾಗಿದೆ. ಆತ ಮದರಸದಲ್ಲಿ ಲೈಂಗಿಕ ಕಿರುಕುಳ ನೀಡುತ್ತಿದ್ದದ್ದು ಮಾತ್ರವಲ್ಲದೆ. ಈ ವಿಷಯವನ್ನು ಯಾರಲ್ಲಿ ಬಾಯ್ಬಿಟ್ಟರೆ ಎಚ್ಚರ ಎಂಬುದಾಗಿಯೂ ಬೆದರಿಕೆ ಒಡ್ಡಿದ್ದ ಎನ್ನಲಾಗಿದೆ.
ಬಾಲಕನ ಪೋಷಕರು ಮೌಲ್ವಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಪುತ್ತೂರು ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.