ಕಾಸರಗೋಡು, ಮೇ 17 (Daijiworld News/SM): ಪೆರಿಯ ಯುವಕಾಂಗ್ರೆಸ್ ಕಾರ್ಯಕರ್ತರಾಗಿದ್ದ ಕೃಪೇಶ್ ಮತ್ತು ಶರತ್ ಲಾಲ್ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿತನಾದ ಉದುಮ ಪಾಕಂ ನ ಸುಬೀಷ್(29) ನನ್ನು ಹೊಸದುರ್ಗ ಪ್ರಥಮ ದರ್ಜೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು , ನ್ಯಾಯಾಲಯ ಹೆಚ್ಚಿನ ವಿಚಾರಣೆಗಾಗಿ ಮೂರು ದಿನಗಳ ಕಾಲ ತನಿಖಾ ತಂಡದ ಕಸ್ಟಡಿಗೆ ಒಪ್ಪಿಸಿದೆ.
ಕೃತ್ಯದ ಬಳಿಕ ಶಾರ್ಜಾಕ್ಕೆ ಪರಾರಿಯಾಗಿದ್ದ ಸುಬೀಷ್ ಊರಿಗೆ ಮರಳುತ್ತಿದ್ದಾಗ ಗುರುವಾರ ಮುಂಜಾನೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಫೆಬ್ರವರಿ 17 ರಂದು ಕೊಲೆ ನಡೆದಿತ್ತು. ಕೃತ್ಯ ನಡೆದು ಎಂಟು ದಿನಗಳ ಬಳಿಕ ಈತಾ ಬೆಂಗಳೂರು ವಿಮಾನ ನಿಲ್ದಾಣ ಮೂಲಕ ವಿದೇಶಕ್ಕೆ ಪರಾರಿಯಾಗಿದ್ದ.
ಈತ ಕೃತ್ಯದಲ್ಲಿ ನೇರವಾಗಿ ಭಾಗಿಯಾದ ಆರೋಪಿಯಾಗಿದ್ದು, ಕ್ರೈಂ ಬ್ರಾಂಚ್ ತಂಡ ಈತನನ್ನು ಹೆಚ್ಚಿನ ವಿಚಾರಣಗೊಳಪಡಿಸಲು ತೀರ್ಮಾನಿಸಿದೆ.