ಕಾಸರಗೋಡು, ಮೇ 18 (Daijiworld News/SM): ಕಾಸರಗೋಡಿನ ಯುಡಿಎಫ್ ಅಭ್ಯರ್ಥಿ ರಾಜ್ ಮೋಹನ್ ಉಣ್ಣಿತ್ತಾನ್ ಮೇಲೆ ಕೇರಳ ರಾಜ್ಯದ ಆಡಳಿತ ಪಕ್ಷ ಸಿಪಿಎಂ ಕಾರ್ಯಕರ್ತರು ಗೂಂಡಾಗಿರಿ ನಡೆಸಿದ್ದಾರೆ.
ಸಿಪಿಎಂ ನಕಲಿ ಮತದಾನ ಪತ್ತೆಯಾದ ನಾಲ್ಕು ಬೂತ್ ಗಳಲ್ಲಿ ಮೇ 19ರಂದು ಮರುಮತದಾನ ನಡೆಯಲಿದ್ದು, ಇದರ ಪ್ರಚಾರಾರ್ಥ ಪಿಲಾತ್ತರ ಎಂಬಲ್ಲಿಗೆ ತೆರಳಿದ ಉಣ್ಣಿತ್ತಾನ್ ರ ಮೇಲೆ ಪ್ರಜಾಪ್ರಭುತ್ವ ವಿಧ್ವಂಸಕರಾದ ಸಿಪಿಎಂ ಗೂಂಡಾಗಳು ಹಲ್ಲೆ ನಡೆಸಿದ್ದಾರೆ ಎಂದು ಯುಡಿಎಫ್ ಆರೋಪಿಸಿದೆ. ಈ ಸಂದರ್ಭದಲ್ಲಿ ವರದಿಗಾರಿಕೆಗೆ ತೆರಳಿದ್ದ ಖಾಸಗಿ ಸುದ್ದಿ ವಾಹಿನಿಯ ವರದಿಗಾರ ಕೂಡಾ ಹಲ್ಲೆಗೊಳಗಾಗಿದ್ದಾರೆ. ಉಣ್ಣಿತ್ತಾನ್ ರವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕಾಸರಗೋಡಿನಲ್ಲಿ ಸಿಪಿಎಂ ಹಿಂಸಾ ರಾಜಕೀಯಕ್ಕೆ ಕೊನೆ ಎಂದು? ಎಂಬುವ ಪ್ರಶ್ನೆ ಇದೀಗ ಸಾರ್ವಜನಿಕರಲ್ಲಿ ಕಾಡಲಾರಂಭಿಸಿದೆ.