ಮಂಗಳೂರು, ನ 24: ಕರಾವಳಿಯ ಜಾನಪದ ಕ್ರೀಡೆ ಕಂಬಳದ ಸುಗ್ರೀವಾಜ್ಞೆಗೆ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ ಎಂದು ಪೇಟಾಕ್ಕೆ ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ ತಿಳಿಸಿದೆ.
ತ್ರಿಸದಸ್ಯ ಪೀಠ ನೀಡಿರುವ ಈ ತೀರ್ಪಿನಿಂದ ಕಂಬಳಕ್ಕಿರುವ ಆತಂಕ ದೂರವಾಗಿದ್ದು, ತುಳುವರು ಕೊಂಚ ನಿಟ್ಟುಸಿರು ಬಿಡುವಂತಾಗಿದೆ.
ಕಂಬಳ ಸುಗ್ರೀವಾಜ್ಞೆಗೆ ತಡೆಯಾಜ್ಞೆ ನೀಡಬೇಕೆಂದು ಪೇಟಾ ಸಂಘಟನೆ ಮತ್ತೆ ವಾದ ಮಂಡಿಸಿದ್ದು, ಇದನ್ನು ನ್ಯಾಯಾಧೀಶರಾದ ದೀಪಕ್ ಮಿಶ್ರಾ, ಚಂದ್ರಬೋರ್ಡೆ, ಕಾನ್ವಿಲ್ಕರ್ ನೇತೃತ್ವದ ತ್ರಿಸದಸ್ಯ ಪೀಠ ತಿರಸ್ಕರಿಸಿ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದೆ.
ಕಂಬಳ ಹಾಗೂ ಎತ್ತಿನಗಾಡಿ ಓಟಕ್ಕೆ ರಾಷ್ಟ್ರಪತಿ ಸುಗ್ರೀವಾಜ್ಞೆ ಮೂಲಕ ಅನುಮತಿ ನೀಡಿರುವ ಕ್ರಮವನ್ನು ವಿರೋಧಿಸಿ ಪ್ರಾಣಿ ದಯಾ ಸಂಘ ಅ.23ರಂದು ಸುಪ್ರೀಂಕೋರ್ಟಿನಲ್ಲಿ ದಾವೆ ಹೂಡಿತು. ವಿಚಾರಣೆ ನಡೆಸಿರುವ ತ್ರಿಸದಸ್ಯ ಪೀಠ ಸುಗ್ರೀವಾಜ್ಞೆ ದಾವೆಗೆ ಸಂಬಂಧಿತ ವಿಚಾರಣೆಯನ್ನು ಮತ್ತೆ ಡಿ.12ಕ್ಕೆ ಮುಂದೂಡಲಾಗಿದೆ.