ಬಂಟ್ವಾಳ, ಮೇ 18(Daijiworld News/MSP): ಕಿಡಿಗೇಡಿಗಳು ಕಲ್ಲೆಸೆದು ಕ್ರಿಸ್ತರಾಜ ದೇವಾಯಲಯದ ಗ್ರೊಟ್ಟೋಗೆ ಹಾನಿ ಮಾಡಿರುವ ಘಟನೆ ತಾಲೂಕಿನ ವಿಟ್ಲ ದ ಪುಣಚ ಮನೆಲದಲ್ಲಿ ನಡೆದಿದ್ದು ಮೇ 18 ರ ಶನಿವಾರ ಘಟನೆ ಬೆಳಕಿಗೆ ಬಂದಿದೆ.
ಕೀಡಿಗೇಡಿಗಳ ಕೃತ್ಯದಿಂದ ಗ್ರೊಟ್ಟೋ ದಲ್ಲಿರುವ ಪ್ರತಿಮೆ ಹಾಗೂ ಗಾಜಿಗೆ ಹಾನಿಯಾಗಿದೆ. ಕ್ರಿಸ್ತರಾಜ ಚರ್ಚ್ ಪುಣಚ - ತೋರಣಕಟ್ಟೆಯ ರಸ್ತೆಯ ಬಳಿ ಇದೆ.
ಈ ಘಟನೆಗೆ ಸಂಬಂಧಪಟ್ಟಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚರ್ಚ್ ನ ಅಧಿಕಾರಿಗಳು ಸಲ್ಲಿಸಿದ ದೂರಿನ ಮೇರೆಗೆ, ಪೊಲೀಸರು ತನಿಖೆ ಆರಂಭಿಸಿದ್ದಾರೆ.