ವಿಟ್ಲ,ಮೇ19(DaijiworldNews/AZM): ಪುಣಚದ ದಿ ಕ್ರೈಸ್ಟ್ ಕಿಂಗ್ ಮನೆಲ ಬಳಿ ಇರುವ ಏಸು ಕ್ರಿಸ್ತರ ಪ್ರತಿಮೆಗೆ ಕಲ್ಲು ಹೊಡೆದು ಹಾನಿ ಮಾಡಿರುವ ಘಟನೆ ಶನಿವಾರದಂದು ನಡೆದಿದ್ದು,ಇಂದು ರಾಜ್ಯ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಗಳು ಹಾಗೂ ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ ಅವರು ಸ್ಥಳಕ್ಕೆ ಭೇಟಿ ನೀಡಿ ಘಟನೆಯನ್ನು ಖಂಡಿಸಿದ್ದಾರೆ.
ಸ್ಥಳಕ್ಕೆ ಬೇಟಿ ನೀಡಿದ ಐವನ್ ಡಿಸೋಜಾರವರು ಘಟನೆಯನ್ನು ಖಂಡಿಸುವ ಮೂಲಕ ಆರೋಪಿಗಳನ್ನು ಶೀಘ್ರವಾಗಿ ಬಂಧಿಸುವಂತೆ ದ.ಕ.ಜಿಲ್ಲಾ ಎಸ್ ಪಿ ಹಾಗೂ ವಿಟ್ಲ ಠಾಣೆಯ ಸಬ್ ಇನ್ಸ್ ಪೆಕ್ಟರ್ ಅವರಿಗೆ ದೂರವಾಣಿ ಮಾಡುವ ಮೂಲಕ ಆಗ್ರಹಿಸಿದರು. ಇದೇ ಸಂದರ್ಭದಲ್ಲಿ ಚರ್ಚ್ ಸಮೀಪ ಹೈಮಾಸ್ಟ ದೀಪ ಅಳವಡಿಸುವ ಬಗ್ಗೆ ಮನವಿ ಪಡೆದುಕೊಂಡ ಐವನ್ ಡಿಸೋಜಾ ಅವರು ತಕ್ಷಣ ಇದನ್ನು ತನ್ನ ಎಂ.ಎಲ್.ಸಿ ನಿಧಿಯಿಂದ ನೀಡಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಚರ್ಚ್ ಧರ್ಮ ಗುರುಗಳು, ದ.ಕ.ಜಿಲ್ಲಾ ಪಂಚಾಯತ್ ಸದಸ್ಯರಾದ ಎಂ.ಎಸ್ ಮೊಹಮ್ಮದ್, ಕ್ರೈಸ್ತ ಸಮುದಾಯ ಭಾಂಧವರು ಉಪಸ್ಥಿತರಿದ್ದರು