ಬ್ರಹ್ಮಾವರ,ಮೇ20(DaijiworldNews/AZM):ಇಂದು ಬೆಳಗ್ಗಿನ ಜಾವ ಉಡುಪಿ, ಬ್ರಹ್ಮಾವರ ಕಡೆ ಗುಡುಗು ಸಹಿತ ಮಳೆ ಸುರಿದಿದೆ.
ಇಂದು ಬೆಳ್ಳಂಬೆಳಗೆ ಉಡುಪಿಯ ಬ್ರಹ್ಮಾವರದ ಹೊನ್ನಾಳದಲ್ಲಿ ಗುಡುಗು ಸಹಿತ ಮಳೆ ಸುರಿದು, ಬಿಸಿಲ ಬೇಗೆಯಲ್ಲಿ ಸುಡುತ್ತಿದ್ದ ವಾತಾವರಣಕ್ಕೆ ತಂಪೆರಗಿದೆ. ಆದರೆ ಮಳೆರಾಯ ಸ್ವಲ್ಪ ಹೊತ್ತಲ್ಲೇ ಮಾಯವಾಗಿದ್ದಾನೆ. ಅಲ್ಪಕಾಲ ಮಳೆ ಜೋರಾಗಿ ಸುರಿದು, ಬಳಿಕ ಮಾಯವಾಗಿದೆ. ಈ ಹಿನ್ನಲೆ ಅಲ್ಪಕಾಲ ವಾತಾವರಣ ತಂಪೆರಗಿದೆಯಾದರೂ, ಮತ್ತೆ ಈ ಪ್ರದೇಶದಲ್ಲಿ ಬಿಸಿಲ ತಾಪ ಭೂಮಿಮಿಗೆ ತಟ್ಟಲು ಶುರುವಾಗಿದೆ.