ಕಾರ್ಕಳ, ಮೇ 20 (Daijiworld News/MSP): ಕಲ್ಯಾ ಗ್ರಾಮದ ಕುಂಟಾಡಿ ರಡ್ಸಾಲ್ ಎಂಬ ಹೆಸರಿನ ಸರಕಾರಿ ಹೊಳೆಯಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮರಳನ್ನು ಕಳ್ಳತನ ಮಾಡಿ ಟಿಪ್ಪರ್ ಗೆ ಲೋಡು ಮಾಡುತ್ತಿದ್ದ ಪ್ರಕರಣವನ್ನು ಗ್ರಾಮಾಂತರ ಎಸ್.ಐ ನಾಸೀರ್ ಹುಸೈನ್ ಪತ್ತೆ ಹಚ್ಚಿದ್ದಾರೆ. ರೋಹಿತ್ ಹೆಗ್ಡೆ, ದೀಕ್ಷಿತ್ ಪ್ರಕರಣದಲ್ಲಿ ಬಂಧಿತ ಆರೋಪಿತರು.
ಆರೋಪಿಗಳು ಸ್ವಾರ್ಥ ಲಾಭಗೋಸ್ಕರ ಮರಳು ಕಳವು ಕೃತ್ಯದಲ್ಲಿ ಭಾಗಿಯಾಗಿದ್ದರು. ಕೃತ್ಯಕ್ಕೆ ಬಳಸಿದ ಟಿಪ್ಪರ್ ಲಾರಿ ನಂಬ್ರ ಕೆ ಎ 20ಸಿ 6057, ಅದರಲ್ಲಿದ್ದ ಒಂದೂವರೆ ಯುನಿಟ್ ಮರಳು , ಮರಳು ತೆಗೆಯಲು ಬಳಸಿದ 2 ಹಾರೆ, ಎರಡು ಪ್ಲಾಸ್ಟಿಕ್ ಬುಟ್ಟಿ ಯನ್ನು ಮುಂದಿನ ಕ್ರಮದ ಬಗ್ಗೆ ವಶಕ್ಕೆ ಪಡೆಯಲಾಗಿದೆ. ಟಿಪ್ಪರ್ ಲಾರಿಯ ಮೌಲ್ಯ ರೂ. 2,00,000 ಹಾಗೂ ಮರಳಿನ ಮೌಲ್ಯ ರೂ. ೬೦೦೦ ಆಗಿರುತ್ತದೆ. ಈ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ಕೇಸುದಾಖಲಾಗಿದೆ.