ಮಂಗಳೂರು, ಮೇ 20 (Daijiworld News/MSP): ನಗರದ ಅಮರ್ ಅಳ್ವ ನಿವಾಸಿ ಶ್ರೀಮತಿ ಶೆಟ್ಟಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಜೋನಸ್ ಜುಲಿನ್ ಸ್ಯಾಮನ್ಸ್ (26)ನನ್ನು ಶನಿವಾರ ರಾತ್ರಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಮೇ 29 ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಈ ಪ್ರಕರಣದಲ್ಲಿ ಆರೋಪಿಗೆ ಸಹಕಾರ ನೀಡಿದ ಜೋನಸ್ ಪತ್ನಿ ವಿಕ್ಟೋರಿಯಾ ಮಥಾಯಿಸ್ (46) ನನ್ನು ಈಗಾಗಲೇ ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾಳೆ.
ಜೋನಸ್ ಜುಲಿನ್ ಸ್ಯಾಮನ್ಸ್ ಶ್ರೀಮತಿ ಶೆಟ್ಟಿಯ ಮೃತದೇಹವನ್ನು ತುಂಡರಿಸಿ ಬೇರೆ ಕಡೆ ಎಸೆದು ವಿಲೇವಾರಿ ಮಾಡಿದ ಬಳಿಕ ತನ್ನ ದ್ವಿಚಕ್ರ ವಾಹನವನ್ನು ಸ್ನೇಹಿತ ಕಾವೂರಿನ ಮರಕಡದ ರಾಜು ಮನೆಯಲ್ಲಿ ಇರಿಸಿದ್ದನು. ಈ ಹಿನ್ನಲೆಯಲ್ಲಿ ಅಶ್ರಯ ನೀಡಿದ ಮೇರೆಗೆ ಮರಕಡದ ರಾಜು ನನ್ನು ಕೂಡಾ ಮೇ 15 ರಂದು ಬಂಧಿಸಲಾಗಿದ್ದು, ಈತನೂ ನ್ಯಾಯಾಂಗ ಬಂಧನದಲ್ಲಿದ್ದಾನೆ.