ಬೆಳ್ತಂಗಡಿ,ಮೇ20(DaijiworldNews/AZM):ದ.ಕ. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ನೀರಿನ ಸಮಸ್ಯೆ ಹೆಚ್ಚಾಗುತ್ತಿದ್ದು, ಧರ್ಮಸ್ಥಳದಲ್ಲೂ ನೀರಿನ ಸಮಸ್ಯೆ ತಲೆದೋರಿದೆ. ಹಾಗಾಗಿ ಧರ್ಮಸ್ಥಳಕ್ಕೆ ಬರುವ ಯಾತ್ರಾರ್ಥಿಗಳು ಸ್ವಲ್ಪ ದಿನಗಳ ಮಟ್ಟಿಗೆ ಪ್ರವಾಸ ಮುಂದೂಡಿ ಎಂದು ಕ್ಷೇತ್ರದ ಧರ್ಮಾಧಿಕಾರಿ ಡಾ. ಡಿ. ವಿರೇಂದ್ರ ಹೆಗ್ಗಡೆಯವರು ಮನವಿ ಮಾಡಿದ್ದಾರೆ. ಹಾಗೂ ಹೆಚ್ಚುತ್ತಿರುವ ನೀರಿನ ಸಮಸ್ಯೆ ಹಿನ್ನಲೆ ಹೋಟೆಲ್ ಗಳಲ್ಲಿ ಊಟಮಾಡಲು ಪ್ಲೇಟ್ ಬದಲು ಬಾಳೆ ಎಲೆಯನ್ನು ನೀಡಲಾಗುತ್ತಿದೆ.
ದ.ಕ. ಜಿಲ್ಲೆಯಾದ್ಯಂತ ಬೇಸಿಗೆಯ ಬಿಸಿ ತೀವ್ರವಾಗಿ ತಟ್ಟುತ್ತಿದೆ. ಸಾಮಾನ್ಯ ಜನರು ನೀರಿಲ್ಲದೆ ಸಂಕಷ್ಟಕ್ಕೀಡಾಗಿದ್ದಾರೆ. ಮತ್ತೊಂದೆಡೆ, ಅತ್ಯಂತ ಹೆಚ್ಚು ಪ್ರವಾಸಿಗರು ಆಗಮಿಸುವ ಧರ್ಮಸ್ಥಳದಲ್ಲೂ ನೀರಿನ ಅಭಾವ ತಲೆದೋರಿದೆ. ಈ ಹಿನ್ನಲೆ ಧರ್ಮಸ್ಥಳಕ್ಕೆ ಬರುವ ಯಾತ್ರಾರ್ಥಿಗಳು ಸ್ವಲ್ಪ ದಿನಗಳ ಮಟ್ಟಿಗೆ ಪ್ರವಾಸ ಮುಂದೂಡಿ ಎಂದು ವಿರೇಂದ್ರ ಹೆಗ್ಗಡೆಯವರು ಮನವಿ ಮಾಡಿದ್ದಾರೆ. ದೇವರ ಅಭಿಷೇಕಕ್ಕೂ ನೀರಿನ ಅಭಾವ ಕಂಡುಬಂದಿರುವುದರಿಂದ ಈ ರೀತಿ ಮನವಿ ಮಾಡಲಾಗಿದೆ.
ದೇವಾಸ್ಥಾನದ ನೀರಿನ ಸಮಸ್ಯೆ ಬಗೆಹರಿಸಲು ಸರ್ಕಾರ ಎಲ್ಲಾ ರೀತಿಯ ಸೌಕರ್ಯ ಒದಗಿಸುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಹೇಳಿದ್ದಾರೆ. ಇನ್ನೂ ನಗರದಲ್ಲಿರುವ ಹೊಟೇಲ್ ಮಾಲೀಕರು ನೀರಿನ ಅಭಾವದಿಂದ ಊಟಕ್ಕೆ ಬಾಳೆಎಲೆ ಮೊರೆ ಹೋಗಿದ್ದಾರೆ.
ಪ್ಲೇಟ್ ಗಳನ್ನು ತೊಳೆಯಲು ನೀರು ಬೇಕಾಗುತ್ತದೆ, ಆದರೆ ಬಾಳೆಎಲೆಯಲ್ಲಿ ತಿಂದು ಬಿಸಾಡಬಹುದು. ನಾವು ಈ ಮೊದಲು ದಿನಕ್ಕೆ 12 ಸಾವಿರ ಲೀಟರ್ ನೀರು ಬಳಸುತ್ತಿದ್ದೆವು, ಈಗ 6ಸಾವಿರ ಲೀಟರ್ ನೀರು ಸಾಕಾಗುತ್ತಿದೆ, ಇನ್ನೂ ಮುಂದೆ ಬಾಳೆಲೆಯಲ್ಲೇ ಗ್ರಾಹಕರಿಗೆ ಊಟ ಒದಗಿಸಲಾಗುವುದು ಹೋಟೆಲ್ ಮಾಲಿಕರು ಹೇಳುತ್ತಿದ್ದಾರೆ.