ಮಂಗಳೂರು, ಮೇ 21 (Daijiworld News/MSP): ಕರಾವಳಿಯಲ್ಲಿ ನಡೆದ ಆ ಘೋರ ದುರಂತ ಇನ್ನು ಮರೆತಿಲ್ಲ. ಅದು 2010ನೇ ಇಸವಿ ಮೇ 22 ಮುಂಜಾನೆ 6:14 ರ ಸಮಯ. ದುಬೈಯಿಂದ ಮಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭೀಕರ ಅಪಘಾತಗೀಡಾಗಿ 8 ಮಂದಿ ಸಿಬ್ಬಂದಿಗಳ ಸಹಿತ 159 ಜೀವಗಳನ್ನು ಬಲಿತೆಗೆದುಕೊಂಡಿತ್ತು. ದುಬೈಯಿಂದ ಕನಸುಗಳನ್ನು ಹೊತ್ತುಕೊಂಡು ತವರಿಗೆ ಮರಳುತ್ತಿದ್ದ ಕನಸುಗಳು ಅಲ್ಲೇ ಜೀವಂತ ಸಮಾಧಿಯಾಗಿತ್ತು.
ಮಂಗಳೂರು ವಿಮಾನ ದುರಂತಕ್ಕೆ ನಾಳೆಗೆ 9 ವರ್ಷ .ದುರಂತದಲ್ಲಿ ಮೃತಪಟ್ಟವರ ಕುಟುಂಬದವರು ಇನ್ನೂ ಸುಪ್ರೀಂ ಕೋರ್ಟ್ ನಲ್ಲಿ ಯೋಗ್ಯವಾದ ಪರಿಹಾರಕ್ಕಾಗಿ ಹೋರಾಡುತ್ತಿದ್ದಾರೆ. ಬಹುತೇಕ ಸಂತ್ರಸ್ತರ ಕುಟುಂಬ ನ್ಯಾಯಾಲಯದಲ್ಲಿ ಹೋರಾಡಿ ಪರಿಹಾರ ಪಡೆದುಕೊಂಡಿದ್ದರೆ, ಮಹಿಳೆಯರು ಮತ್ತು ಮಕ್ಕಳ ಸಂತ್ರಸ್ತ ಕುಟುಂಬವು ಸುಪ್ರೀಂ ಕೋರ್ಟ್ ನಲ್ಲಿ ನಡೆಸುತ್ತಿರುವ ಹೋರಾಟಕ್ಕೆ ಶೀಘ್ರ ಜಯ ಸಿಗುವ ಸಾಧ್ಯತೆ ಇವೆ