ಮೂಡಬಿದಿರೆ, ನ 26: ಚಿರತೆಯೊಂದು ದಾಳಿ ಮಾಡಿ ದನದ ಹಟ್ಟಿಯಲ್ಲಿ ಕಟ್ಟಿಹಾಕಲಾಗಿದ್ದ ಕರುವನ್ನು ತಿಂದು ತೇಗಿದ ಘಟನೆ ಮೂಡಬಿದಿರೆ ಪುರಸಭಾ ವ್ಯಾಪ್ತಿಯಲ್ಲಿ ಮಾರೂರಿನಲ್ಲಿ ನಡೆದಿದೆ. ಚಿರತೆ ದಾಳಿ ಇದೀಗ ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಮೂಡಬಿದಿರೆ ಜೆಡಿಎಸ್ ಅಧ್ಯಕ್ಷ ಅಶ್ವಿನ್ ಜೊಸ್ಸಿ ಪಿರೇರಾ ಅವರ ತಂದೆ ವಿನ್ಸೆಂಟ್ ಪಿರೇರಾ ಅವರ ಮನೆ ಹಟ್ಟಿಗೆ ಶನಿವಾರ ರಾತ್ರಿ ದಾಳಿ ಮಾಡಿರುವ ಚಿರತೆ ಹಟ್ಟಿಯಲ್ಲಿ ಕಟ್ಟಿಹಾಕಲಾಗಿದ್ದ ಕರುವನ್ನು ತಿಂದು ಹಾಕಿದೆ. ಸ್ಥಳಕ್ಕೆ ಅರಣ್ಯಾಧಿಕಾರಿ ಪ್ರಕಾಶ್ ಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.