ಮಂಗಳೂರು, ಮೇ21(Daijiworld News/SS): ದೇಶವನ್ನು ಆಳುವವರು ಮತ್ತು ಕೆಲವು ಬಿಜೆಪಿ ಸಂಸದರು ರಾಜೀವ್ ಗಾಂಧಿ ಬಗ್ಗೆ ಕೀಳುಮಟ್ಟದಲ್ಲಿ ಮಾತನಾಡಿರುವುದು ದುರದೃಷ್ಟಕರ ಎಂದು ಮಾಜಿ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದರು.
ನಗರದಲ್ಲಿ ನಡೆದ ರಾಜೀವ್ ಗಾಂಧಿಯ ಪುಣ್ಯತಿಥಿಯ ವರ್ಷಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶವನ್ನು ಆಳುವವರು ಮತ್ತು ಕೆಲವು ಬಿಜೆಪಿ ಸಂಸದರು ರಾಜೀವ್ ಗಾಂಧಿ ಬಗ್ಗೆ ಕೀಳುಮಟ್ಟದಲ್ಲಿ ಮಾತನಾಡಿರುವುದು ದುರದೃಷ್ಟಕರ. 18 ವರ್ಷಕ್ಕೆ ಮತದಾನದ ಹಕ್ಕು ನೀಡುವುದರ ಮೂಲಕ ಯುವ ಜನತೆಗೆ ಸ್ಪೂರ್ತಿ ತುಂಬಿದ್ದಾರೆ. ಮಾತ್ರವಲ್ಲ ರಾಂಜೀವ್ ಗಾಂಧಿ ಹಗರಣ ಮುಕ್ತರಾಗಿ ಪ್ರತಿಯೊಬ್ಬ ರಾಜಕಾರಣಿಗೂ ಮಾದರಿಯಾಗಿದ್ದರು. ಅವರೊಬ್ಬ ಸಜ್ಜನ ರಾಜಕಾರಣಿ ಎಂದು ನುಡಿದರು.
ರಾಜೀವ್ ಗಾಂಧಿ ನಮ್ಮ ದೇಶವನ್ನು 21ನೇ ಶತಮಾನದತ್ತ ಕೊಂಡ್ಯೊಯುವ ನಿಟ್ಟಿನಲ್ಲಿ ದೇಶದಲ್ಲಿ ದೂರದರ್ಶನ ಮತ್ತು ಕಂಪ್ಯೂಟರ್ ಕ್ರಾಂತಿಯನ್ನು ಆರಂಭಿಸಿದ ಮಹಾನ್ ನಾಯಕ. ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರನ್ನು ದೂಷಣೆ ಮಾಡುವವರನ್ನು ಕಾಂಗ್ರೆಸ್ ಪಕ್ಷವು ಎಂದಿಗೂ ಸಹಿಸದು ಮತ್ತು ಕ್ಷಮಿಸದು ಎಂದು ಹೇಳಿದ್ದಾರೆ.
ಇದೇ ವೇಳೆ ಮಾತನಾಡಿದ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ, ನಮ್ಮ ದೇಶಕ್ಕಾಗಿ ಬಲಿದಾನ ಮಾಡಿದ ಕಾಂಗ್ರೆಸ್ ನಾಯಕರನ್ನು ದೇಶದ್ರೋಹಿಳೆಂದು ಯಾರು ಬಿಂಬಿಸುತ್ತಾರೋ ಅವರು ನಿಜವಾದ ದೇಶದ್ರೋಹಿಗಳು ಎಂದು ಟೀಕಿಸಿದರು.
ದೇಶಕ್ಕೆ ರಾಜೀವ್ ಗಾಂಧಿ ನೀಡಿದ ಕೊಡುಗೆ ಅಪಾರ. ಇಲ್ಲಿನ ಸಂಸದರು ತಿಳಿಗೇಡಿಯಾಗಿ ವರ್ತಿಸಿ ರಾಜೀವ್ ಗಾಂಧಿಯನ್ನು ನಿಂದಿಸಿರುವುದು ಅಕ್ಷಮ್ಯ ಅಪರಾಧ. ರಾಜೀವ್ ಗಾಂಧಿ ಬಗ್ಗೆ ಕೀಳಾಗಿ ಮಾತನಾಡಿರುವುದು ಸರಿಯಲ್ಲ ಎಂದು ಹೇಳಿದರು.