ಮುಂಬೈ ದಾಳಿಯ ಕಹಿನೆನಪಿಗೆ ಇಂದಿಗೆ 9 ವರ್ಷ ಈ ನಿಟ್ಟಿನಲ್ಲಿ ದೇಶಾದ್ಯಂತ ಕರಾವಳಿ ಪ್ರದೇಶಗಳಲ್ಲಿ ಎಲ್ಲಾ ರೀತಿಯ ಅನುಮಾನಾಸ್ಪದ ಚಟುವಟಿಕೆಗಳ ಮೇಲೆ ನಿಗಾ ಇಡಲು ಮಹತ್ವದ ಕ್ರಮಕ್ಕೆ ಕೇಂದ್ರ ಮುಂದಾಗಿದೆ.ಪರಿಣಾಮ ಕರ್ನಾಟಕ, ಗೋವಾ, , ತಮಿಳುನಾಡು, ಆಂಧ್ರ ಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳ, ಕೇರಳ, ಗುಜರಾತ್, ಮಹಾರಾಷ್ಟ್ರ ಹಾಗೂ ಕೇಂದ್ರಾಡಳಿತ ಪ್ರದೇಶಗಳಾದ ದಮನ್ ಮತ್ತು ದಿಯು, ಲಕ್ಷದ್ವೀಪ, ಪುದಚೇರಿ ಹಾಗೂ ಅಂಡಮಾನ್ ಮತ್ತು ನಿಕೋಬರ್ ಕರಾವಳಿ ಪ್ರದೇಶದಲ್ಲಿ ಕೇಂದ್ರ ತನ್ನ ಹದ್ದಿನ ಕಣ್ಣಿಡಲಿದೆ. ಯಾವುದೇ ಸಂಶಯಾಸ್ಪದ ಹಡಗು ಮತ್ತು ದೋಣಿಗಳನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಇಸ್ರೋ ಸ್ಯಾಟಲೈಟ್ಗಳನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಇದ್ದಕ್ಕಾಗಿಯೇ ಮಾರ್ಚ್ ವೇಳೆಗೆ 1000 ಟ್ರಾನ್ಸ್ಪಾಂಡರ್ಗಳನ್ನು ಇಸ್ರೋ ಒದಗಿಸುವ ಯೋಜನೆ ಹಾಕಿಕೊಂಡಿದೆ.